ಕೆಎಸ್‌ಸಿಎ ಕ್ರಿಕೆಟ್: ರಾಮ್ ಬುಟಾನಿ ಶತಕ
Update: 2019-02-28 21:39 IST
ಮಣಿಪಾಲ, ಫೆ.28: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ನಡೆದಿರುವ ಎರಡನೆ ಡಿವಿಜನ್‌ನ ತಲಾ ನಿಗದಿತ ಓವರುಗಳ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ತಂಡವು ಮಂಗಳೂರಿನ ಎಂಆರ್‌ಪಿಎಲ್ ಕ್ರಿಕೆಟ್ ತಂಡವನ್ನು 118 ರನ್‌ಗಳ ಅಂತರದಿಂದ ಪರಾಜಯಗೊಳಿಸಿತು.
ಮಣಿಪಾಲದ ಎಂಡ್‌ಪಾಯಿಂಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯ ದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಉಡುಪಿ ಜಿಲ್ಲಾ ತಂಡ, ರಾಮ್ ಬುಟಾನಿ ಅವರ 4 ಸಿಕ್ಸರ್ ಮತ್ತು 13 ಬೌಂಡರಿಗಳನ್ನೊಳಗೊಂಡ ಆಕರ್ಷಕ ಶತಕದ (103)ದ ನೆರವಿನಿಂದ 48 ಓವರುಗಳಲ್ಲಿ 287 ರನ್‌ಗಳಿಸಿ ಆಲೌಟಾದರೆ, ಉತ್ತರವಾಗಿ ಎಂಆರ್‌ಪಿಎಲ್ ತಂಡ 169 ರನ್‌ಗಳಿಗೆ ಆಲೌಟಾಯಿತು. ತಂಡದ ಅರುಣ್ ಕುಮಾರ್ ಮಾತ್ರ 63 ರನ್‌ಗಳ ದಿಟ್ಟ ಆಟವಾಡಿದರು.