×
Ad

ಉಡುಪಿ: ನೂತನ ಎಸ್ಪಿಯವರ ಮೊದಲ ಫೋನ್‌ಇನ್

Update: 2019-02-28 21:40 IST

ಉಡುಪಿ, ಫೆ. 28: ನಿಶಾ ಜೇಮ್ಸ್ ಅವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಫೋನ್‌ ಇನ್ ಕಾರ್ಯಕ್ರಮ ವನ್ನು ಮಾ.1ರಂದು ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಸಲಿದ್ದಾರೆ.

ಸಾರ್ವಜನಿಕರು ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದು. ಅಥವಾ ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಸಂಬಂಧ ಪಟ್ಟಂತೆ ಸಲಹೆ-ದೂರುಗಳನ್ನು ನೀಡಬಹುದು. ನೇರ ಫೋನ್‌ಇನ್‌ಗೆ ಕರೆ ಮಾಡುವವರ ವಿವರಗಳನ್ನು ಗುಪ್ತವಾಗಿರಿಸಲಾಗುವುದು.

ಕರೆ ಮಾಡಬಯಸುವವರು ಶುಕ್ರವಾರ ಬೆಳಗ್ಗೆ 10 ರಿಂದ 11 ರ ನಡುವಿನ ಅವಧಿಯಲ್ಲಿ ಸ್ಥಿರ ದೂರವಾಣಿ ಸಂಖ್ಯೆ: 0820-2534777ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News