ಹೊಳೆಗೆ ಹಾರಿ ಆತ್ಮಹತ್ಯೆ
Update: 2019-02-28 21:41 IST
ಅಜೆಕಾರು, ಫೆ.28: ಮರ್ಣೆ ಗ್ರಾಮದ ಕೊಂಬಗುಡ್ಡೆ ಜ್ಯೋತಿನಗರದ ರವೀಂದ್ರ (46) ಎಂಬವರು ಮಂಗಳವಾರ ಬೆಳಗ್ಗೆ 9 ಗಂಟೆಗೆ ಅಜೆಕಾರಿ ನಿಂದ ಹೋದವರು ನಾಪತ್ತೆಯಾಗಿದ್ದು, ಅವರ ಮೃತದೇಹ ಬುಧವಾರ ಮರ್ಣೆ ಗ್ರಾಮದ ಹೆರ್ಮುಂಡೆ ಸೇತುವೆಯ ಬೊಳ್ಳ ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ.
ವಿಪರೀತ ಕುಡಿತದ ಚಟ ಹೊಂದಿದ್ದ ರವೀಂದ್ರ ಅವರು ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬೊಳ್ಳ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರ ಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.