ಮಂಗಳೂರು ವಿವಿ ಪ್ರಭಾರ ಕುಲಪತಿಯಾಗಿ ಪ್ರೊ. ಕಿಶೋರಿ ನಾಯಕ್ ಅಧಿಕಾರ ಸ್ವೀಕಾರ
Update: 2019-02-28 22:16 IST
ಕೊಣಾಜೆ, ಫೆ. 28: ಮಂಗಳೂರು ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಪತಿಗಳಾಗಿ ಸಮಾಜ ವಿಜ್ಞಾನ ವಿಭಾಗದ ಡೀನ್, ಆಂಗ್ಲ ಭಾಷಾ ವಿಭಾಗದ ಪ್ರೊ. ಕಿಶೋರಿ ನಾಯಕ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ವಿವಿಯ ನೂತನ ಆಡಳಿತ ಸೌಧದ ಕುಲಪತಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾರ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದ ಪ್ರೊ. ಈಶ್ವರ್ ಪಿ ಅವರು ಅಧಿಕಾರ ಹಸ್ತಾಂತರಿಸಿದರು.
ಕುಲಸಚಿವ ಪ್ರೊ. ಎ.ಎಂ. ಖಾನ್, ಪರೀಕ್ಷಾಂಗ ಕುಲಸಚಿವ ಪ್ರೊ. ರವೀಂದ್ರಾಚಾರ್, ಕುಲಸಚಿವರ ಕಚೇರಿ ವಿಶೇಷ ಅಧಿಕಾರಿ ಪ್ರೊ. ನಾಗಪ್ಪ ಗೌಡ, ಹಣಕಾಸು ಅಧಿಕಾರಿ ಡಾ. ದಯಾನಂದ ನಾಯಕ್ ಹಾಗೂ ಪಿಎಂಇ ಬೋರ್ಡ್ ನಿರ್ದೇಶಕ ಪ್ರೊ. ಜಯಪ್ಪ ಉಪಸ್ಥಿತರಿದ್ದರು.