ಅಣ್ಣ ತಮ್ಮಂದಿರ ನಡುವೆ ಜಗಳ: ಗಾಯಾಳು ಮೃತ್ಯು
Update: 2019-02-28 22:55 IST
ಬೆಳ್ತಂಗಡಿ, ಫೆ. 28: ಕಳೆಂಜ ಗ್ರಾಮದಲ್ಲಿ ಅಣ್ಣ ತಮ್ಮಂದಿರ ನಡುವೆ ನಡೆದ ಜಗಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊರ್ವ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಸಂಜೀವ (49) ಎಂದು ಗುರುತಿಸಲಾಗಿದೆ.
ಫೆ 26 ರಂದು ಈತನ ಮನೆಯಲ್ಲಿ ಅಣ್ಣ ಜಾರಪ್ಪ ಹಾಗೂ ಸಂಜೀವ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ಇಬ್ಬರೂ ಪಾನಮತ್ತರಾಗಿದ್ದು ಜಾರಪ್ಪ ಚೂರಿಯಿಂದ ಸಂಜೀವರಿಗೆ ಇರಿದಿದ್ದು, ಗಂಭೀರ ಗಾಯಗೊಂಡ ಸಂಜೀವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.