ಐಸಿಸ್ ಸಂಶೋಧನಾ ಘಟಕ ಆರಂಭಿಸುವ ಪ್ರಸ್ತಾವಕ್ಕೆ ಅನುಮೋದನೆ: ರಾಜನಾಥ್ ಸಿಂಗ್

Update: 2019-03-01 15:41 GMT

ಹೈದರಾಬಾದ್, ಮಾ. 1: ಭಯೋತ್ಪಾದಕ ಗುಂಪು ಐಸಿಸ್ ಕುರಿತು ಸಂಶೋಧನಾ ಘಟಕ ತೆರೆಯುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಸ್ತಾಪಕ್ಕೆ ಸರಕಾರ ಅನುಮತಿ ನೀಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಪರಿಣಾಮಕಾರಿ ತನಿಖೆ ಹಾಗೂ ಮೇಲ್ವಿಚಾರಣೆಗೆ ಎನ್‌ಐಎಯಲ್ಲಿ 100 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

‘‘ಎನ್‌ಐಎ ಹಾಗೂ ಇತರ ತನಿಖಾ ಸಂಸ್ಥೆಗಳ ಪ್ರಯತ್ನದಿಂದ ಭಾರತದ ನಕಲಿ ನೋಟುಗಳ ಚಲಾವಣೆ ಕಡಿಮೆಯಾಗಿದೆ’’ ಎಂದು ಅವರು ಹೇಳಿದರು. ಐಸಿಸ್ ಕುರಿತು ಸಂಶೋಧನಾ ಘಟಕ ಆರಂಭಿಸಲು ನಾವು ಎನ್‌ಐಎಗೆ ಅನುಮತಿ ನೀಡಿದ್ದೇವೆ ಎಂದು ಸಿಂಗ್ ತಿಳಿಸಿದ್ದಾರೆ. 77 ಕೋಟಿ ರೂಪಾಯಿ ವೆಚ್ಚದಲ್ಲಿ ಎನ್‌ಬಿಸಿಸಿ ಭಾರತ ಗುವಾಹತಿ ಹಾಗೂ ಇಲ್ಲಿನ ಎನ್‌ಐಎ ಎರಡು ನೂತನ ಕಚೇರಿ ಹಾಗೂ ಗೃಹ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಹೈದರಾಬಾದ್ ಎನ್‌ಐಎ ಸಂಕೀರ್ಣ ಎಲ್ಲವನ್ನೂ ಒಳಗೊಂಡ ಯೋಜನೆ. ಇದು 12,572 ಕಿ.ಮೀ. ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಇದನ್ನು 37 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಆಡಳಿತ ಕಚೇರಿ ಹಾಗೂ ಫ್ಲ್ಯಾಟ್‌ಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಗುವಾಹತಿ ಯೋಜನೆ 40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು 9830 ಚದರ ಅಡಿಯಲ್ಲಿ ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News