×
Ad

ಲಾರಿಯಲ್ಲಿದ್ದ ಹಣದೊಂದಿಗೆ ಕ್ಲೀನರ್ ಪರಾರಿ

Update: 2019-03-01 21:57 IST

ಕುಂದಾಪುರ, ಮಾ.1: ಲಾರಿ ಕ್ಲೀನರ್ ಲಾರಿಯಟ್ಟಿದ್ದ ಲಕ್ಷಾಂತರ ರೂ. ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಫೆ. 25ರಂದು ಸಂಜೆ ವೇಳೆ ಕೋಟೇಶ್ವರ ಕಾಮತ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಯುಸೂಫ್ ಎಂಬವರ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ ಕ್ಯಾಸನೂರ್ ಎಂಬವರು ಬಾಡಿಗೆ ಹಣ ಮತ್ತು ಮಾಲಕರಿಗೆ ಬೇರೆ ಯವರಿಂದ ಬರಬೇಕಾದ ಬಾಕಿ ಹಣವನ್ನು ಸಂಗ್ರಹಿಸಿ ಒಟ್ಟು 2,85,202 ರೂ.ವನ್ನು ಕೋಟೇಶ್ವರದಲ್ಲಿ ನಿಲ್ಲಿಸಿದ್ದ ಲಾರಿಯೊಳಗೆ ಸೀಟಿನ ಮೇಲ್ಭಾಗದಲ್ಲಿ ರುವ ಬಾಕ್ಸ್‌ನಲ್ಲಿ ಇಟ್ಟು ಕ್ಲಿನರ್ ಮಂಜುನಾಥ ಎಂಬಾತನಲ್ಲಿ ನೋಡಿಕೊಳ್ಳು ವಂತೆ ಹೇಳಿ ಹೊರಗೆ ಹೋಗಿದ್ದರೆನ್ನಲಾಗಿದೆ.

ನಾಗರಾಜ್ ಮರಳಿ ಲಾರಿ ಬಳಿ ಬಂದು ನೋಡಿದಾಗ ಮಂಜುನಾಥ್ ಲಾರಿಯಲ್ಲಿಟ್ಟಿದ್ದ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವುದು ತಿಳಿದುಬಂತು.

ಈ ಬಗ್ಗೆ ಕುಂದಾಪುರ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News