ಅಕ್ರಮ ಮರಳು ಸಾಗಾಟ, ಹಲ್ಲೆ ಪ್ರಕರಣ: ಬಿಜೆಪಿ ಜಿಪಂ ಸದಸ್ಯ ಸಹಿತ ಹಲವು ಮಂದಿ ವಿರುದ್ಧ ಪ್ರಕರಣ ದಾಖಲು

Update: 2019-03-01 16:42 GMT

ಕೋಟ, ಮಾ.1: ಸೀತಾನದಿಯಲ್ಲಿ ಅಕ್ರಮ ಮರಳು ಸಾಗಾಟ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಉಡುಪಿ ಜಿಪಂ ಬಿಜೆಪಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಸೇರಿದಂತೆ ಹಲವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ಟಿಪ್ಪರ್, ಒಂದು ಜೆಸಿಬಿ, ನಾಲ್ಕು ಕಾರುಗಳ ಮೂಲಕ ಜಿಪಂ ಬಿಜೆಪಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಪ್ರವೀಣ್ ಹೆಗ್ಡೆ ಮಾರಾಳಿ, ವಿಜಯ ಶೆಟ್ಟಿ ಗೋಳಿಯಂಗಡಿ ಯಳಂತೂರು, ಸುದೀಫ್ ಶೆಟ್ಟಿ ಹಳ್ಳಿ, ದಿನೇಶ್ ಶೆಟ್ಟಿ ನಂಚಾರು , ದಯಾನಂದ ಶೆಟ್ಟಿ ಹಾಗೂ ಇತರರು ಜ.18ರಂದು ರಾತ್ರಿ ವೇಳೆ ನಂಚಾರು ಗ್ರಾಮದ ರಬ್ಬರ್ ಪ್ಲಾಂಟೇಶನ್‌ನ ಗೇಟಿನ ಬೀಗವನ್ನು ಮುರಿದು ಅಕ್ರಮವಾಗಿ ಒಳಗೆ ಪ್ರವೇಶಿಸಿದ್ದರು ಎಂದು ದೂರಲಾಗಿದೆ.

ಅಲ್ಲಿ ಇವರೆಲ್ಲ ಸೀತಾನದಿ ಹೊಳೆಯಿಂದ ಮರಳನ್ನು ತೆಗೆದಿದ್ದು, ಈ ವೇಳೆ ಆರೋಪಿಗಳು ಪ್ಲಾಂಟೇಶನ್‌ನ ಕಾವಲುಗಾರ ಸುಧೀರ್ ಶೆಟ್ಟಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿರುವ ಟಾರ್ಚ್ ಹಾಗೂ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಫ್ಲಾಂಟೇಶನ್‌ನ ಮಾಲಕರ ಸ್ನೇಹಿತ ರಮೇಶ್ ಶೆಟ್ಟಿ ಎಂಬವರಿಗೂ ಬೆದರಿಸಿ ಮರಳು ಸಹಿತ ವಾಹನಗಳ ಮೂಲಕ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಆರೋಪಿಗಳು ಹೊಳೆಯ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿ ಸರಕಾರಕ್ಕೆ 10,00,000 ರೂ. ಅಧಿಕ ನಷ್ಟವನ್ನುಂಟು ಮಾಡಿರುವುದಾಗಿ ಸುಧೀರ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News