ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ- 151 ಮಂದಿ ಗೈರು
Update: 2019-03-01 22:15 IST
ಉಡುಪಿ, ಮಾ.1: ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ಬಿಗು ಭದ್ರತೆ ಯೊಂದಿಗೆ ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ನಡೆದ ಎರಡು ಪರೀಕ್ಷೆಗಳಿಗೆ ಒಟ್ಟು 151 ಮಂದಿ ವಿದ್ಯಾರ್ಥಿಗಳು ಗೈರುಹಾಜರಾದರು.
ಭೌತಶಾಸ್ತ್ರ ಪರೀಕ್ಷೆಗೆ ಒಟ್ಟು 5124 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು ಇವರಲ್ಲಿ 5098 ಮಂದಿ ಪರೀಕ್ಷೆ ಬರೆಯುವ ಮೂಲಕ 26 ಮಂದಿ ಗೈರು ಹಾಜರಾದರು. ಉಡುಪಿ ತಾಲೂಕಿನಲ್ಲಿ 13, ಕಾರ್ಕಳದಲ್ಲಿ ಐವರು ಹಾಗೂ ಕುಂದಾಪುರ ತಾಲೂಕಿನಲ್ಲಿ ಎಂಟು ಮಂದಿ ಗೈರಾದರು.
ಅರ್ಥಶಾಸ್ತ್ರ ಪರೀಕ್ಷೆಗೆ 9534 ಮಂದಿ ನೊಂದಾವಣೆಗೊಂಡಿದ್ದು, ಇವರಲ್ಲಿ 9409 ಮಂದಿ ಪರೀಕ್ಷೆ ಬರೆದು 125 ಮಂದಿ ಗೈರುಹಾಜರಾಗಿದ್ದಾರೆ. ಉಡುಪಿ ತಾಲೂಕಿನಲ್ಲಿ 64, ಕಾರ್ಕಳದಲ್ಲಿ 15 ಹಾಗೂ ಕುಂದಾಪುರದಲ್ಲಿ 46 ಮಂದಿ ಗೈರುಹಾಜರಾಗಿದ್ದಾರೆ.
ಇಂದು ಜಿಲ್ಲೆಯಲ್ಲಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದಿದ್ದು, ಎಲ್ಲಿಂದಲೂ ಯಾವುದೇ ಅಕ್ರಮ ಅಥವಾ ಅವ್ಯವಹಾರದ ವರದಿಗಳು ಬಂದಿಲ್ಲ ಎಂದು ಡಿಡಿಪಿಯು ಕಚೇರಿ ಮೂಲಗಳು ತಿಳಿಸಿವೆ.