ಮಾ.3ರಂದು ಲೊರೆಟ್ಟೊ ಪದವು ವಲಯ ಘಟಕದ ಸಮಿತಿ ರಚನಾ ಸಭೆ: ಕೃಷಿ ಬಿಕ್ಕಟ್ಟು-ಸವಾಲುಗಳ ಕುರಿತು ವಿಚಾರ ಸಂಕೀರ್ಣ
ಬಂಟ್ವಾಳ, ಮಾ. 1: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಂಟ್ವಾಳ ತಾಲೂಕು ಘಟಕದ ಆಶ್ರಯ ದಲ್ಲಿ ಪ್ರಸ್ತುತ ಕೃಷಿ ಬಿಕ್ಕಟ್ಟು ಹಾಗೂ ಸವಾಲುಗಳ ಕುರಿತು ವಿಚಾರ ಸಂಕೀರ್ಣ ಮತ್ತು ಲೊರೆಟ್ಟೊ ಪದವು ವಲಯ ಘಟಕದ ಸಮಿತಿ ರಚನಾ ಸಭೆ ಮಾ.3ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ.
ಅವರು ಶುಕ್ರವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷಿ ಆಧಾರಿತವಾದ ನಮ್ಮ ದೇಶವು ಕಳೆದ 2 ದಶಕಗಳಿಂದ ಕೃಷಿ ಉತ್ಪನ್ನ ಅಸ್ಥಿರ ಮಾರುಕಟ್ಟೆ ಧಾರಣೆ ಅಧಿಕವಾದ ಉತ್ಪಾದನಾ ವೆಚ್ಚ, ಪ್ರಾಕೃತಿಕ ವಿಕೋಪ, ಅತಿವೃಷ್ಟಿ ಹಾಗೂ ಬರದಿಂದ ರೈತರು ಬಸವಳಿದರೂ ಸರಕಾರಗಳ ತಪ್ಪು ನೀತಿಗಳಿಂದಾಗಿ ಅನುತ್ಪಾದಕ ಕ್ಷೇತ್ರವಾಗಿ ಪರಿವರ್ತನೆಯಾಗುತ್ತಿದೆ. ಯುವ ಸಮುದಾಯ ನಗರ ಪ್ರದೇಶದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದರೆ, ಗ್ರಾಮೀಣ ಕೃಷಿ ಕ್ಷೇತ್ರದಲ್ಲಿ ವೃದ್ಧರನ್ನು ಏಕಾಂಗಿಯಾಗಿಸುತ್ತಿದೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಉದ್ಘಾಟಿಸಲಿದ್ದಾರೆ, ತಾಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಭಟ್ ಕೊಜಂಬೆ, ಲೊರೆಟ್ಟೊ ಮಾತಾ ಚರ್ಚಿನ ಉಪಾಧ್ಯಕ್ಷ ರಿಚರ್ಡ್ ಮಿನೇಜಸ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್, ವಿನಯ್ ರೂಪಸ್ ಪಿಂಟೋ ಹಾಜರಿದ್ದರು