ಫಿಲೋ ಫ್ಯಾಬ್: ವಾಮದಪದವು ಕಾಲೇಜಿಗೆ ಸಮಗ್ರ ಪ್ರಶಸ್ತಿ
Update: 2019-03-01 22:36 IST
ಬಂಟ್ವಾಳ, ಮಾ. 1: ಪುತ್ತೂರಿನ ಸಂತ ಫಿಲೋಮಿನಾ ಕಾಲೇನಲ್ಲಿ ಇತ್ತೀಚೆಗೆ ನಡೆದ "ಫಿಲೋ ಫ್ಯಾಬ್-2019" ಅಂತರ ಕಾಲೇಜು ಫೆಸ್ಟ್‍ನಲ್ಲಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡವು ಕೊಲಾಜ್ ಮತ್ತು ಮೆಗಾ ಇವೆಂಟ್‍ನಲ್ಲಿ ಪ್ರಥಮ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು, ಅಂತರ ಕಾಲೇಜು ಫೆಸ್ಟ್‍ನಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಸಮಂತ್, ನಿಶ್ಮಿತಾ, ವಿಜಯ್, ಸಂತೋಷ್, ವಾಣಿಶ್ರೀ, ಸುಮ, ಸ್ವಾತಿ, ಧನ್ಯಶ್ರೀ, ಜೋಲನ್ ಮುಂಡ ಹಾಗೂ ಬಿಶಾಲ್ ಕರ್ಹಾರ್ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕಿ ಡಾ. ಮೇರಿ. ಎಂ. ಜೆ ಹಾಗೂ ಪ್ರೊ. ಅಶೋಕ ಕುಮಾರ ಬಾವಿಕಟ್ಟಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದಾರೆ ಎಂದು ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ಅವರು ತಿಳಿಸಿದ್ದಾರೆ.