×
Ad

ಮಾ. 3ರಂದು ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್‌ಗೆ ಸನ್ಮಾನ

Update: 2019-03-01 22:39 IST

ಮಂಗಳೂರು, ಮಾ.1: ಭಾರತದ ಸುನ್ನೀ ಮುಸ್ಲಿಮರ ಗ್ರಾಂಡ್ ಮುಫ್ತಿಯಾಗಿ ನೇಮಕಗೊಂಡ ಅಖಿಲ ಭಾರತ ಸುನ್ನಿ ವಿದ್ವಾಂಸ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವವಿಖ್ಯಾತ ವಿದ್ಯಾಕೇಂದ್ರ ಮರ್ಕಝಸ್ಸಖಾಫಾತಿ ಸ್ಸುನ್ನೀಯ ಸ್ಥಾಪಕ ಶೈಕುನ ಅಲ್‌ಹಾಜ್ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರನ್ನು ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಮಸ್ಜಿದ್ ತಖ್ವಾದಿಂದ ಮಾ. 3ರಂದು ಸಂಜೆ 6:30ಕ್ಕೆ ನಗರದ ಪಂಪ್‌ವೆಲ್‌ನ ಮಸ್ಜಿದು ತಖ್ವಾದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಈ ಸಮಾರಂಭದಲ್ಲಿ ತಾಜುಲ್ ಫುಖಹಾ ಖಾಝಿ ಆರ್‌ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಝೈನಲ್ ಉಲಾಮ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಶರಫುಲ್ ಉಲಾಮ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪದಾಧಿಕಾರಿಗಳಾದ ಕಣಚೂರು ಮೋನು ಹಾಜಿ, ಹಾಜಿ ಕೆ.ಮುಹಮ್ಮದ್ ಅರಬಿ, ಹಾಜಿ ಅಬ್ದುಲ್ ಅಝೀಝ್ ಹಸನ್, ಕೋಶಾಧಿಕಾರಿ ಹಾಗೂ ಮುತವಲ್ಲಿ ಎಸ್.ಎಂ. ರಶೀದ್ ಹಾಜಿ, ಕಾರ್ಯದರ್ಶಿಗಳಾದ ಎ.ಎ. ಹೈದರ್ ಪರ್ತಿಪ್ಪಾಡಿ, ಅಲ್‌ಹಾಜ್ ಅಬ್ದುಲ್ ರಶೀದ್ ಝೈನಿ, ಟ್ರಸ್ಟಿಗಳಾದ ಯೊನಪೊಯ ಮುಹಮ್ಮದ್ ಕುಂಞಿ, ಕುಂಞಿ ಅಹ್ಮ್ಮದ್ ಹಾಜಿ ಎಚ್.ಎಚ್, ಇಬ್ರಾಹೀಂ ಬಾವ ಹಾಜಿ, ಹಾಜಿ ಪಿ.ಸಿ. ಹಾಶೀರ್, ಎಚ್.ಐ. ಅಬೂಸೂಫೀಯಾನ್ ಇಬ್ರಾಹೀಂ ಮದನಿ, ಹಾಜಿ ಕೆ.ಮುಹಮ್ಮದ್ ಹಾರಿಶ್, ಹಾಜಿ ಬಿ.ಎಂ. ಶೌಕತ್ ಅಲಿ, ಹಾಜಿ ಜಿ.ಮೆಹಮುದ್ ಹಾಜಿ, ಹಾಜಿ ಬಶೀರ್ ಅಹ್ಮದ್, ಮುಕ್ರಿ ಇಬ್ರಾಹೀಂ ಹಾಜಿ, ಬಿ.ಎ. ನಝೀರ್, ಡಾ.ತಾಹಿರ್, ಹಾಜಿ ಅಬ್ದುಲ್ ಮಜೀದ್, ಹಾಜಿ ರಿಯಾಝ್ ಬಾವಾ, ಉಲಮಾ ಮತ್ತು ಉಮಾರಾಗಳು, ಸಾದಾತುಗಳು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಮಸ್ಜಿದು ತಖ್ವಾ ಇದರ ಅಧ್ಯಕ್ಷ ಅಲ್ ಹಾಜ್ ಯೆನಪೊಯ ಅಬ್ದುಲ್ಲಾ ಕುಂಞಿ ವಹಿಸಲಿ ದ್ದಾರೆ. ಸಮಾರಂಭದಲ್ಲಿ ಧರ್ಮಾಭಿಮಾನಿಗಳೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಲ್‌ಹಾಜ್ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News