×
Ad

ಎರಡು ಎಲೆಗಳ ಚಿಹ್ನೆ: ಹೈಕೋರ್ಟ್ ತೀರ್ಪು ಸುಪ್ರೀಂನಲ್ಲಿ ಪ್ರಶ್ನಿಸಲು ಟಿಟಿವಿ ದಿನಕರನ್ ಸಿದ್ಧ

Update: 2019-03-01 23:03 IST

ಹೊಸದಿಲ್ಲಿ, ಮಾ. 1: ಮುಖ್ಯಮಂತ್ರಿ ಎಡಪಳ್ಳಿ ಕೆ. ಪಳನಿಸ್ವಾಮಿ ನೇತೃತ್ವದ ಬಣಕ್ಕೆ ಎರಡು ಎಲೆಗಳ ಚಿಹ್ನೆ ನೀಡಿರುವ ಚುನಾವಣಾ ಆಯೋಗದ ಆದೇಶವನ್ನು ಎತ್ತಿ ಹಿಡಿದು ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಐಎಡಿಎಂಕೆ ನಾಯಕ ಹಾಗೂ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ನಿರ್ಧರಿಸಿದ್ದಾರೆ.

ಹೈಕೋರ್ಟ್‌ನ ಆದೇಶದ ವಿರುದ್ಧ ನಾವು ಸುಪ್ರೀಂ ಕೋರ್ಟ್‌ನ ಮೆಟ್ಟಲೇರಲಿದ್ದೇವೆ ಎಂದು ದಿನಕರನ್ ಪರ ನ್ಯಾಯವಾದಿ ರಾಜಾ ಸೆಂಥೂರ್ ಪಾಂಡ್ಯನ್ ತಿಳಿಸಿದ್ದಾರೆ. ಚುನಾವಣಾ ಆಯೋಗ 2017 ನವೆಂಬರ್ 23ರಂದು ನೀಡಿದ ಆದೇಶವನ್ನು ನ್ಯಾಯಮೂರ್ತಿ ಜಿ.ಎಸ್. ಸಿಸ್ಟಾನಿ ಹಾಗೂ ಸಂಗೀತಾ ಧಿಂಗ್ರಾ ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News