ಜೋಸೆಫ್ ಇಂಜಿನಿಯರಿಂಗ್ ಕಾಲೇಜ್‌ಗೆ ‘ಶೆಲ್ಸ್ 2019’ ಸಮಗ್ರ ಪ್ರಶಸ್ತಿ
Update: 2019-03-01 23:03 IST
ಮಂಗಳೂರು, ಮಾ.1: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ವಿದ್ಯಾರ್ಥಿಗಳು ಫೆ.26-27ರಂದು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಿಂದ ನಡೆಸಲಾದ ರಾಷ್ಟ್ರೀಯ ಮಟ್ಟದ ತಾಂತ್ರಿಕ ಸ್ಪರ್ಧೆ ‘ಶೆಲ್ಸ್ 2019’ ಇದರಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.
ತಂಡದಲ್ಲಿ ಎಂಸಿಎ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಪ್ರಜ್ವಲ್ ಚಾರ್ಲ್ಸ್ ಮಸ್ಕರೆನ್ಹಸ್, ಡಿಸಿಲ್ವಾ ಡಿಯೋನಾ ಡೇನಿಯಲ್, ಡಿಸಿಲ್ವಾ ಫಿಯೋನಾ ಡೇನಿಯಲ್, ಡೊನಿಟಾ ಜೇನ್ ತೆರೇಸಾ ಡಿಸೋಜ, ಕಾರ್ತಿಕ್, ನೈಜಿಲ್ ಆಂಟನಿ ಡಿಸೋಜ, ಅಕ್ಷಿತ್ ವೈ, ರಾಯ್ಸಟನ್ ಜೋಶ್ವಾ ಅಲ್ವಾರೆಸ್, ಸೈಯದ್ ಅಫ್ವಾನ್, ಸುಶಾನ್, ಸ್ವಾತಿ ಬಿ.ಎನ್., ಜೀತೇಶ್ ಎಚ್.ಕೆ ಭಾಗವಹಿಸಿದ್ದರು.