ಜ್ಯೋತಿ ಚೇಳಾರುಗೆ ಪಿಎಚ್‌ಡಿ
Update: 2019-03-01 23:07 IST
ಮಂಗಳೂರು, ಮಾ.1: ಉಡುಪಿ ಜಿಲ್ಲೆಯ ಎರ್ಮಾಳು ಬಡಾ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚೇಳಾರು ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ದೊರೆತಿದೆ.
ಹಂಪಿ ವಿವಿಯ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಭಾಷಾ ನಿಕಾಯದ ಡೀನ್ ಡಾ. ಎ.ಸುಬ್ಬಣ್ಣ ರೈ ಮಾರ್ಗದರ್ಶನದಲ್ಲಿ ಮಂಡಿಸಿದ ‘ಕರಾವಳಿ ಕರ್ನಾಟಕದಲ್ಲಿ ಕೃಷಿ ಸಂಸ್ಕೃತಿಯ ಪಲ್ಲಟ ಮತ್ತು ಅದರ ಸಾಹಿತ್ಯಿಕ ಅಭಿವ್ಯಕ್ತಿ’ ಎಂಬ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿವಿ 27ನೇ ನುಡಿ ಹಬ್ಬದಲ್ಲಿ ಪಿಎಚ್‌ಡಿ ಪದವಿ ನೀಡಿದೆ.