×
Ad

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌: ‘ಸೀಕೋ ಪ್ರೆಸೇಜ್’ ವಾಚ್ ಸಂಗ್ರಹ ವಿಭಾಗ ಉದ್ಘಾಟನೆ

Update: 2019-03-02 19:30 IST

ಮಂಗಳೂರು, ಮಾ. 2: ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ‘ಸೀಕೋ ಪ್ರೆಸೇಜ್’ ವಾಚ್ ಸಂಗ್ರಹ ವಿಭಾಗವನ್ನು ಚಿತ್ರನಟಿ ಪೂಜಾ ಗಾಂಧಿ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನನಗೆ ಮಂಗಳೂರು ಅಂದರೆ ತುಂಬಾ ಇಷ್ಟ. ಅದರಲ್ಲೂ ಸುಲ್ತಾನ್ ಗೋಲ್ಡ್‌ನ ಎರಡು ಕಾರ್ಯಕ್ರಮಕ್ಕೆ ತುಂಬಾ ಪ್ರೀತಿ-ವಿಶ್ವಾಸದಿಂದ ಬಂದಿದ್ದೇನೆ. ಚಿನ್ನಾಭರಣ ಮತ್ತು ವಜ್ರಾಭರಣದ ಈ ಮಳಿಗೆಯಲ್ಲಿ ಜಗತ್ಪ್ರಸಿದ್ಧ ‘ಸೀಕೋ’ ಕಂಪೆನಿಯ ವಾಚ್‌ಗಳ ಮಾರಾಟ ವಿಭಾಗವನ್ನು ತೆರೆದಿರುವುದು ಸಂತಸದ ವಿಚಾರ. ಗ್ರಾಹಕರಿಗೆ ಸಂತೃಪ್ತಿಯ ಸೇವೆಯೊಂದಿಗೆ ಈ ವಿಭಾಗವು ಪ್ರಗತಿ ಹೊಂದಲಿ ಎಂದು ಹಾರೈಸಿದರು.

ಸೀಕೋ ವಾಚಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರವಿಶಂಕರ ಮಾತನಾಡಿ ಸೀಕೋ ಕಂಪೆನಿಯು ಮಂಗಳೂರು ಅಲ್ಲದೆ ಕಾಸರಗೋಡು, ಶಿವಮೊಗ್ಗ, ದಾವಣಗೆರೆ ಮತ್ತಿತರ ಕಡೆ ಮಾರಾಟ ಮಳಿಗೆಯನ್ನು ಹೊಂದಿದೆ. ವಾಚ್ ಬಳಸುವವರಲ್ಲಿ ಶೇ.95ರಷ್ಟು ಮಂದಿ ಸೀಕೋ ಕಂಪೆನಿಯ ವಾಚ್ ಬಳಸುವುದು ಹೆಮ್ಮೆಯ ವಿಚಾರವಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ವಿನ್ಯಾಸ ಮತ್ತು ಬಣ್ಣದ ವಾಚ್‌ಗಳನ್ನು ಸಿದ್ಧಪಡಿಸಲಾಗುತ್ತದೆ ಎಂದರು.

ಸೀಕೋ ವಾಚಸ್ ಇಂಡಿಯಾದ ದಕ್ಷಿಣ ವಿಭಾಗದ ಮ್ಯಾನೇಜರ್ ಲಕ್ಷ್ಮಿ ಕಾಂತನ್ ಸೀಕೋ ವಾಚ್‌ಗಳ ಬಗ್ಗೆ ಮಾಹಿತಿ ನೀಡಿ 35 ಸಾವಿರ ರೂ.ನಿಂದ ಹಿಡಿದು 1.75 ಲಕ್ಷ ರೂ.ವರೆಗಿನ ವಾಚ್‌ಗಳು ಮಾರಾಟಕ್ಕೆ ಲಭ್ಯವಿದೆ. 1881ರಲ್ಲಿ ಸ್ಥಾಪನೆಯಾದ ಈ ಕಂಪೆನಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗಳನ್ನು ಬದಲಾಯಿಸುತ್ತಾ ಬಂದಿದೆ. 100 ವರ್ಷವಾದರೂ ಹೊಳಪು ಮಾಸದ ಉತ್ಕೃಷ್ಟ ವಾಚ್‌ಗಳನ್ನೂ ಕೂಡ ಕಂಪೆನಿಯು ಸಿದ್ಧಪಡಿಸುತ್ತಿರು ವುದು ಹೆಮ್ಮೆಯ ವಿಚಾರ ಎಂದರು.

ಈ ಸಂದರ್ಭ ಸುಲ್ತಾನ್ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ.ಟಿ.ಎಂ.ಅಬ್ದುಲ್ ರವೂಫ್, ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ. ಅಬ್ದುಲ್ ರಹೀಂ, ಸುಲ್ತಾನ್ ವಾಚ್ ವಿಭಾಗದ ವ್ಯವಸ್ಥಾಪಕ ಲತೀಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News