×
Ad

ಇರ್ವತ್ತೂರು: ನೂತನ ಸೇತುವೆ ಉದ್ಘಾಟನೆ

Update: 2019-03-02 19:58 IST

ಕಾರ್ಕಳ, ಮಾ. 2: ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ ಯೋಜನೆಯ ಸುಮಾರು 255 ಲಕ್ಷ ರೂ. ಅನುದಾನದ ನೂತನ ಸೇತುವೆಯ ಉದ್ಘಾಟನೆಯು ಇರ್ವತ್ತೂರು ಗ್ರಾಮದಲ್ಲಿ ನಡೆಯಿತು. 

ಶಾಸಕ, ರಾಜ್ಯ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು. ಈ ಯೋಜನೆಯ ಮೂಲಕ ರಾಜ್ಯದಲ್ಲಿಯೇ 1000 ಸೇತುವೆಯ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದು ಈ 1000 ಸೇತುವೆ ಕಾಮಗಾರಿಗಳಲ್ಲಿ ಇರ್ವತ್ತೂರು ಸಂಪರ್ಕ ಸೇತುವೆಯು ಅತೀ ಶೀಘ್ರ ನಿರ್ಮಾಣಗೊಂಡು ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಪೂರ್ಣಗೊಂಡು ಉದ್ಘಾಟನೆಗೊಂಡಿರುವುದು ಗಮನಾರ್ಹ.

ಊರಿನ ಹಿರಿಯರಾದ ಭಾಸ್ಕರ್ ಎಸ್ ಕೊಟ್ಯಾನ್, ಜಯಕೀರ್ತಿ ಕಡಂಬ, ನಾರಾಯಣ ಭಟ್, ಮಿಯ್ಯಾರು ಜಿ.ಪಂ.ಸದಸ್ಯೆ ದಿವ್ಯಾ ಗಿರೀಶ್ ಅಮೀನ್, ಬಜಗೋಳಿ ಜಿ.ಪಂ. ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಉದಯ ಎಸ್. ಕೊಟ್ಯಾನ್, ತಾ.ಪಂ ಸದಸ್ಯೆ ಪ್ರಮೀಳಾ ಆನಂದ ಕುಲಾಲ್, ಸಾಣೂರು ತಾ.ಪಂ. ಸದಸ್ಯ ಪ್ರವೀಣ್ ಕೋಟ್ಯಾನ್, ಪಂಚಾಯಿತಿ ಅಧ್ಯಕ್ಷೆ ಪುಷ್ಪ ದೇವಾಡಿಗ, ಸಾಣೂರು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ, ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಅಂಚನ್, ಊರಿನ ಗಣ್ಯರಾದ ರಘುಚಂದ್ರ ಜೈನ್, ಬಾಲಕೃಷ್ಣ ಶೆಟ್ಟಿ, ಭರತ್ ಕುಮಾರ್ ಜೈನ್, ಸುಧಾಕರ ಶೆಟ್ಟಿ , ಭುಜಂಗ ಶೆಟ್ಟಿ, ವಿಜಯ ಜೈನ್, ಸೇತುವೆಯ ಗುತ್ತಿಗೆದಾರರಾದ ರವಿ ಕಿರಣ್ ಡಿಕೋಷ್ಟ, ಕೃಷ್ಣಮೂರ್ತಿ, ಊರಿನ ಪಂಚಾಯತ್‍ನ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News