×
Ad

ನಿಟ್ಟೆ: ಎಂಸಿಎ ವಿಭಾಗದ ಉತ್ಸವ ಸೆಮಫೋರ್ ಉದ್ಘಾಟನೆ

Update: 2019-03-02 20:06 IST

ಕಾರ್ಕಳ, ಮಾ. 2: ಮನಸ್ಸಿನ ಮೇಲಿನ ಹಿಡಿತ ಸಾಸುವ ಶಕ್ತಿ ನಮ್ಮದಾಗಬೇಕು. ಪ್ರತಿಯೋರ್ವನೂ ಕಲಿಕೆಯ ಹುಮ್ಮಸ್ಸನ್ನು ಹೆಚ್ಚಿಸುವ ಬಗ್ಗೆ ಚಿಂತಿಸ ಬೇಕು. ನಿರಂತರ ಕಲಿಕೆ ಹಾಗೂ ವಿವಿಧ ವಿಷಯಗಳ ಬಗ್ಗೆ ಆಸಕ್ತಿ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ವಾರ್ಫ್‍ಡ್ರೈವ್ ಟೆಕ್‍ವಕ್ಸ್ ಎಲ್.ಪಿ.ಪಿ ಬೆಂಗಳೂರಿನ ಫರ್‍ಫಾರ್ಮೆನ್ಸ್ ಸ್ಪೆಶಲಿಸ್ಟ್ ಜಾನಿ ಕೆ. ಜೋಸೆಫ್ ಹೇಳಿದ್ದಾರೆ.

ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ವಾರ್ಷಿಕ ಉತ್ಸವ ಸೆಮಫೋರ್ 2019ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. 
ಯಾವುದೇ ವೃತ್ತಿಯಲ್ಲಿ ತಾವು ತಮ್ಮ ಭವಿಷ್ಯ ಯಶಸ್ವಿಯಾಗಿಸಲು ಹೊಸ ವಿಚಾರಗಳ ಕಲಿಕೆಗೆ ಮುಕ್ತ ಮನಸ್ಸು ಹೊಂದಿರಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಮಾತನಾಡಿ, ನಿಟ್ಟೆಯ ಎಂ.ಸಿ.ಎ ವಿಭಾಗವು ಕಳೆದ ಹಲವು ವರ್ಷಗಳಲ್ಲಿ ಉತ್ತಮವಾಗಿ ಬೆಳೆಯುತ್ತಿದ್ದು ವಿದ್ಯಾರ್ಥಿಗಳ ಸೃಜನಶೀಲತೆ ಅಸಾಧಾರಣವಾದುದು. ವಿವಿಧ ಸರ್ಟಿಫಿಕೇಟ್ ಕೋರ್ಸ್ ನಡೆಸಿ ಜ್ಞಾನವೃದ್ಧಿ ಮಾಡಿಕೊಳ್ಳುವ ಅಗತ್ಯವಿದೆ. ಕಾಲೇಜು ಕೊಠಡಿಯ ಪಾಠಕ್ಕಿಂತಲೂ ಪ್ರಾಯೋಗಿಕ ಜ್ಞಾನ ಅತಿಮುಖ್ಯ ಎಂದರು. 

ಸೆಮಫೋರ್-19 ಟೆಕ್ ಫೆಸ್ಟ್ ಕಾರ್ಯಕ್ರಮದಡಿ ನಡೆಸಲಾಗುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದರು.

ವಿಭಾಗ ಮುಖ್ಯಸ್ಥ ಡಾ. ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ನಿಟ್ಟೆ ಎಂ.ಸಿ.ಎ ವಿಭಾಗದ ನಿರ್ದೇಶಕ ಡಾ. ಕೆ.ಎಂ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಪ್ರಾಧ್ಯಾಪಕಿ ಮಂಗಳಾ ಎ.ಜಿ ಅತಿಥಿಯನ್ನು ಪರಿಚಯಿಸಿದರು. ಸೆಮಫೋರ್‍ನ ಕಾರ್ಯದರ್ಶಿ ಹರೊಲಿನ್ ವಾಜ್ 2018ನೇ ಸಾಲಿನ ಸೆಮಫೋರ್ ವರದಿ ವಾಚಿಸಿದರು. ಎಸ್‍ಎಎಂಸಿಎ ಅಧ್ಯಕ್ಷ ಗುರುಪ್ರಸಾದ್ ಅಧ್ಯಕ್ಷರನ್ನ ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿನಿ ಕ್ರಿಸ್ಟೀನಾ ಕಾರ್ಯಕ್ರಮ ನಿರೂಪಿಸಿದರು. ಎಸ್‍ಎಎಂಸಿಎ ಕಾರ್ಯದರ್ಶಿ ಅಕ್ಷತಾ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News