×
Ad

ಆನ್‌ಲೈನ್ ಅರ್ಜಿ ತಿರಸ್ಕೃತ- ತಿದ್ದುಪಡಿಗೆ ಸೂಚನೆ

Update: 2019-03-02 20:27 IST

ಉಡುಪಿ, ಮಾ. 2: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ- ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಇ-ಪಾಸ್ ವೆಬ್‌ಸೈಟ್ ಮುಖಾಂತರ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪೈಕಿ ತಿರಸ್ಕೃತಗೊಂಡ ಅರ್ಜಿಗಳನ್ನು ಅರ್ಹಗೊಳಿಸಲು ಕೋರಲಾಗಿದೆ.

ಆಧಾರ್ ಅಥೆಂಟಿಕೇಶನ್ ವಿಫಲತೆಯಿಂದ ತಿರಸ್ಕೃತಗೊಂಡಿರುವ ಅರ್ಜಿ ಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮಾ.5ರ ಒಳಗೆ ಸರಕಾರಿ ಆಧಾರ್ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಅಥೆಂಟಿಕೇಶನ್‌ಗೆ ಸಂಬಂಧಿ ಸಿದಂತೆ ತಿದ್ದುಪಡಿ ಮಾಡಿಸಿ, ಸಂಬಂಧಪಟ್ಟ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಗಳಲ್ಲಿ ಆಧಾರ್ ದಾಖಲೆಗಳನ್ನು ಸಲ್ಲಿಸಿ, ಅರ್ಜಿಗಳನ್ನು ಅಪ್‌ಡೇಟ್ ಮಾಡಿಸಿಕೊಂಡು, ತಮ್ಮ ಅರ್ಜಿಗಳನ್ನು ಅರ್ಹಗೊಳಿಸಿಕೊಳ್ಳಲು ಸೂಚಿಸಲಾಗಿದೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ:0820-2573881/0820-2574881ಅನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News