ಮಾ.3ರಂದು ಮಲ್ಪೆಯಲ್ಲಿ ‘ಪಾಂಚಜನ್ಯ’ ಸಮಾವೇಶ
Update: 2019-03-02 20:40 IST
ಉಡುಪಿ, ಮಾ.2: ನಮೋ ಭಾರತ್ ಉಡುಪಿ ಜಿಲ್ಲಾ ಘಟಕದ ವತಿ ಯಿಂದ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ‘ಪಾಂಚಜನ್ಯ’ ಸಮಾವೇಶವನ್ನು ಮಲ್ಪೆ ಬೀಚ್‌ನಲ್ಲಿ ಮಾ.3ರಂದು ಸಂಜೆ 5ಗಂಟೆಗೆ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿ, ಸಂಸದೆ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಆಗಮಿಸಲಿರುವರು. ಈ ಸಮಾವೇಶದಲ್ಲಿ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ನಮೋ ಭಾರತ್ ಉಡುಪಿ ಸಂಚಾಲಕ ಶಶಾಂಕ್ ಶಿವತ್ತಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ಜಿಲ್ಲೆಯ ವಿವಿಧ ಮೂಲೆಗಳಿಂದ ಆಗಮಿಸುವ ಕಾರ್ಯ ಕರ್ತರಿಂದ ವಡಂಬಾಂಡೇಶ್ವರದವರೆಗೆ ವಾಹನ ಜಾಥಾ ನಡೆಯಲಿದ್ದು, ಇದೇ ವೇಳೆ ಮಲ್ಪೆಯ ವೇದಿಕೆಯಲ್ಲಿ ಸ್ವರಭಾರತಿ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ಜರಗಲಿದೆ.
ಸುದ್ದಿಗೋಷ್ಠಿಯಲ್ಲಿ ನಮೋ ಭಾರತ್ ಸದಸ್ಯರಾದ ಕಾರ್ತಿಕ್ ಕುಂದರ್, ಅವಿನಾಶ್ ಶೆಟ್ಟಿ, ಚೈತ್ರಾ ಕೋಟ ಉಪಸ್ಥಿತರಿದ್ದರು.