ಅದಾನಿ ಸಮೂಹದ ಅಧ್ಯಕ್ಷರಾಗಿ ಕಿಶೋರ್ ಆಳ್ವ ಪದೋನ್ನತಿ
Update: 2019-03-02 20:45 IST
ಉಡುಪಿ, ಮಾ.2: ದೇಶದ ವ್ಯಾಪಾರಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರಾಗಿ ಕಿಶೋರ್ ಆಳ್ವ ಪದೋನ್ನತಿ ಹೊಂದಿದ್ದಾರೆ.
ಇವರು ಅದಾನಿ ಸಂಸ್ಥೆಯಲ್ಲಿ ಜಂಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥೆಯಲ್ಲಿ ಪ್ರದರ್ಶಿಸಿದ ಕಾರ್ಯಬದ್ಧತೆ, ಕ್ರಿಯಾಶೀಲತೆ ಮತ್ತು ನಾಯಕತ್ವ ಗುಣಗಳನ್ನು ಪ್ರಶಂಶಿಸಿ ಅವರನ್ನು ಜನರಲ್ ಮ್ಯಾನೇಜರ್‌ನಿಂದ ಉಪಾಧ್ಯಕ್ಷರ ಹುದ್ದೆಗೆ ನಂತರ ಹಿರಿಯ ಉಪಾಧ್ಯಕ್ಷರ ಸ್ಥಾನಕ್ಕೆ ತದನಂತರ ಜಂಟಿ ಅಧ್ಯಕ್ಷರ ಸ್ಥಾನಕ್ಕೆ ನೇಮಿಸಲಾಗಿತ್ತು.
ಕಿಶೋರ್ ಆಳ್ವ ಸುಮಾರು 700 ಪ್ರತಿಷ್ಠಿತ ಸಂಸ್ಥೆಗಳ ಸದಸ್ಯರಿರುವ ಬೆಂಗಳೂರು ಚೇಂಬರ್ ಆ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.