ದ್ವಿತೀಯ ಪಿಯುಸಿ ಪರೀಕ್ಷೆ: ಓರ್ವ ಗೈರು
Update: 2019-03-02 21:29 IST
ಉಡುಪಿ, ಮಾ.2: ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿಯ ಎರಡು ಪರೀಕ್ಷೆಗಳಲ್ಲಿ ಒಬ್ಬ ವಿದ್ಯಾರ್ಥಿ ಗೈರುಹಾಜರಾಗಿದ್ದಾನೆ.
ಇನ್‌ಫಾರ್ಮೆಷನ್ ಟೆಕ್ನಾಲಜಿ-ಐಟಿ- ಪರೀಕ್ಷೆಗೆ ಹೆಸರು ನೊಂದಾಯಿಸಿ ಕೊಂಡ ಎಲ್ಲಾ ಆರು ಮಂದಿ ಹಾಜರಾದರೆ, ಅಟೋಮೊಬೈಲ್ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 10 ಮಂದಿಯಲ್ಲಿ ಒಬ್ಬ ಗೈರುಹಾಜರಾಗಿ ರುವುದಾಗಿ ಡಿಡಿಪಿಯು ಕಚೇರಿ ಪ್ರಕಟಣೆ ತಿಳಿಸಿದೆ.