×
Ad

ಕಂಚಿಕಾನ ದೇವಸ್ಥಾನದ ಚಿನ್ನಾಭರಣ ಕಳವು

Update: 2019-03-02 22:21 IST

ಬೈಂದೂರು, ಮಾ.2: ಉಪ್ಪುಂದ ಗ್ರಾಮದ ಕಂಚಿಕಾನ ರಸ್ತೆ ಬಳಿಯ ಆನೆಗಣಪತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಅರ್ಚಕರಾಗಿರುವ ಗಿರೀಶ ಹೊಳ್ಳ ಫೆ.28ರಂದು ಬೆಳಗ್ಗೆ ದೇ ಸ್ಥಾನ ಪೂಜಾ ಕಾರ್ಯಕ್ರಮ ಮುಗಿಸಿ ಗರ್ಭಗುಡಿಗೆ ಬೀಗ ಹಾಕಿ ಹೋಗಿದ್ದು ಮಾ.1ರಂದು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಈ ಮಧ್ಯೆ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಚಿಲಕವನ್ನು ಮುರಿದ ಕಳ್ಳರು, ದೇವರಿಗೆ ಸಂಬಂಧಪಟ್ಟ ಒಂದು ಲಕ್ಷ್ಮೀ ಸರ, ಒಂದು ನೆಕ್ಲೇಸ್, 2 ಚಿನ್ನದ ಚೈನ್ ಸೇರಿದಂತೆ ಒಟ್ಟು 62 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಇವುಗಳ ಒಟ್ಟು ವೌಲ್ಯ 1,95,000 ರೂ. ಎಂದು ಅಂದಾ ಜಿಸಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News