×
Ad

ಮಾ.6: ದ.ಕ .ಕಾಂಗ್ರೆಸ್‌ನಿಂದ ಪರಿವರ್ತನಾ ಸಮಾವೇಶ

Update: 2019-03-02 22:30 IST

ಮಂಗಳೂರು, ಮಾ. 2: ದಕ್ಷಿಣ ಕನ್ನಡ ಕಾಂಗ್ರೆಸ್ ವತಿಯಿಂದ ಮಾ. 6ರಂದು ಸಂಜೆ 3ಗಂಟೆಗೆ ನಗರದ ಅಡ್ಯಾರ್ ಗಾರ್ಡನ್ ನಲ್ಲಿ ಪರಿವರ್ತನಾ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಸಿ.ಎಂ.ಇಬ್ರಾಹೀಂ, ಯು.ಟಿ.ಖಾದರ್, ಡಿ.ಕೆ.ಶಿವ ಕುಮಾರ್, ರಮಾನಾಥ ರೈ, ಐವನ್ ಡಿ ಸೋಜ, ವಿಷ್ಣುನಾಥ್,ಎಚ್.ಕೆ .ಪಾಟೀಲ್, ದಿನೇಶ್ ಗುಂಡೂರಾವ್, ಈಶ್ಚರ ಖಂಡ್ರೆ, ಕೆ.ಸಿ.ವೇಣುಗೊಪಾಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ಯೋಧರ ಬಲಿದಾನವನ್ನು ರಾಜಕೀಯಕ್ಕೆ ಬಳಕೆಗೆ ವಿರೋಧ:- ದೇಶದ ಗಡಿಯನ್ನು ಪ್ರಾಣದ ಹಂಗು ತೊರೆದು ಕಾಯುತ್ತಿರುವ ಯೋಧರಿಗೆ ದೇಶದ ಜನತೆ ಗೌರವ ಸಲ್ಲಿಸುತ್ತಿರುವಾಗ ಬಿಜೆಪಿ ಅದರಿಂದ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತೊಡಗಿರುವ ಖಂಡನೀಯ ಬೇಸರ ಸಂಗತಿಯಾಗಿದೆ ಎಂದ ಹರೀಶ್ ಕುಮಾರ್‌, ಬಿಜೆಪಿ ಮುಖಂಡ ಯಡಿಯೂರಪ್ಪರ ಹೇಳಿಕೆಯ ಬಗ್ಗೆ ಖೇದ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳಾದ ಸದಾಶಿವ ಉಳ್ಳಾಲ, ಸಂತೋಷ ಕುಮಾರ್ ಶೆಟ್ಟಿ, ಸಲೀಂ, ಮುಸ್ತಾಫ, ನಝೀರ್ ಬಜಾಲ್, ಟಿ.ಕೆ ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News