ಅಕ್ರಮ ಗಣಿಗಾರಿಕೆ: ಗುಜರಾತ್‌ನ ಕಾಂಗ್ರೆಸ್ ಶಾಸಕನಿಗೆ ಕಾರಾಗೃಹ ಶಿಕ್ಷೆ

Update: 2019-03-02 17:09 GMT

ಅಹ್ಮದಾಬಾದ್, ಮಾ. 2: 1995ರಲ್ಲಿ ದಾಖಲಿಸಲಾದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಭಗವಾನ್ ಬರಾಡ್ ಅವರಿಗೆ ಗುಜರಾತ್ ನ್ಯಾಯಾಲಯ ಶುಕ್ರವಾರ ಎರಡು ವರ್ಷ ಹಾಗೂ 9 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬರಾಡ್ ಅವರಿಗೆ ನ್ಯಾಯಾಲಯ 2,500 ರೂ. ದಂಡವನ್ನು ಕೂಡ ವಿಧಿಸಿದೆ. ಬರಾಡ್ ಅವರು ಗಿರ್ ಸೋಮನಾಥ್ ಜಿಲ್ಲೆಯ ತಲಾಲ್‌ನ ಹಾಲಿ ಶಾಸಕ.

ಸೂತ್ರಪಾದದ ಸರಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಮೂಲಕ 2.83 ಕೋ. ರೂ. ಸುಣ್ಣದ ಕಲ್ಲು ಕಳವುಗೈದ ಆರೋಪದಲ್ಲಿ ಬರಾಡ್‌ಗೆ 2 ವರ್ಷ 9 ತಿಂಗಳು ಕಾರಾಗೃಹ ಶಿಕ್ಷೆಯನ್ನು ಸೂತ್ರಪಾದ ತಾಲೂಕು ನ್ಯಾಯಾಲಯದ ದಂಡಾಧಿಕಾರಿ ಎಸ್.ಎಲ್. ಮೆಹ್ತಾ ವಿಧಿಸಿದ್ದಾರೆ.

1995ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಎಫ್‌ಐಆರ್ ಪ್ರಕಾರ ಬರಾಡ್ ಅವರು ಸರಕಾರಿ ಭೂಮಿಯಿಂದ 2.83 ಕೋ. ರೂ.ನ ಸುಣ್ಣದ ಕಲ್ಲಿನ ಗಣಿಗಾರಿಕೆ ಮಾಡಿದ್ದರು. ಅದನ್ನು ಸ್ಥಳೀಯ ರಾಸಾಯನಿಕ ಕಾರ್ಖಾನೆಗೆ ಮಾರಿದ್ದರು ಎಂದು ಸರಕಾರಿ ವಕೀಲ ಡಿ.ಜೆ. ತ್ರಿವೇದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News