ಮಾ.5,6: ಬೆಟ್ಟಂಪಾಡಿಯಲ್ಲಿ ಮಹಿಳಾ ಥ್ರೋ ಬಾಲ್ ಪಂದ್ಯಾಟ
ಪುತ್ತೂರು : ಮಂಗಳೂರು ವಿ.ವಿ.ಅಂತರ್ ಕಾಲೇಜು ಮಟ್ಟದ ಮಹಿಳಾ ವಿಭಾಗದ ಥ್ರೋಬಾಲ್ ಪಂದ್ಯಾಟವು ಮಾ.5 ಮತ್ತು 6 ರಂದು ಬೆಟ್ಟಂಪಾಡಿ ಸ.ಪ್ರ.ದ.ಕಾಲೇಜಿನಲ್ಲಿ ನಡೆಯಲಿದೆ.
ಮಾ.5 ರಂದು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಭಟ್ ಎನ್, ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ.ಸದಸ್ಯೆ ಮೀನಾಕ್ಷಿ ಮಂಜುನಾಥ, ಮಂಗಳೂರು ವಿ.ವಿ.ಸಿಂಡಿಕೇಟ್ ಸದಸ್ಯ ಆಶೋಕ್ ಕುಮಾರ್ ರೈ, ಮಂಗಳೂರು ವಿ.ವಿ.ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ. ಭಾಗವಹಿಸಲಿದ್ದಾರೆ.
ಮಾ.6 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಾಂಶುಪಾಲ ರಾಧಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವೇಣುಗೋಪಾಲ ನೋಂಡಾ, ಬೇಬಿ ಜಯರಾಮ, ರಂಗನಾಥ, ವೆಂಕಟರಮಣ ಬೋರ್ಕರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.