ಜೂನಿಯರ್ ಫ್ರೆಂಡ್ಸ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2019-03-04 12:51 GMT

ಮಂಗಳೂರು: ಜೂನಿಯರ್ ಫ್ರೆಂಡ್ಸ್ ಕುದ್ರೋಳಿ ಇದರ ವತಿಯಿಂದ ದ್ವಿತೀಯ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಕುದ್ರೋಳಿಯ ಟಿಪ್ಪು ಮೈದಾನದಲ್ಲಿ ಮಾರ್ಚ್ 3ರಂದು ನಡೆಯಿತು.

ಜೂನಿಯರ್ ಫ್ರೆಂಡ್ಸ್ ಅಧ್ಯಕ್ಷ ನೌಶೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ನಡುಪಳ್ಳಿ ಜುಮಾ ಮಸೀದಿಯ ಖತೀಬ್ ಅಬ್ದುಲ್ ಸಲಾಮ್ ಯಮಾನಿ ಉದ್ಘಾಟಿಸಿದರು. ದ.ಕ.ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ನಿಕಾಹ್ ನೆರವೇರಿಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ-ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಂ.ಮುಹಮ್ಮದ್ ಮಸೂದ್, ಸರಳ ವಿವಾಹಗಳಿಗೆ ಪ್ರೇರೇಪಿಸುವಂತಹ ಇಂತಹ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ. ಸಂಸ್ಥೆಯು ಮುಂದಿನ ದಿನಗಳಲ್ಲೂ ಇಂತಹ ಮಾದರಿ ಸೇವೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.

ಮನಪಾ ಕಾರ್ಪೋರೇಟರ್ ಅಬ್ದುಲ್ ಅಝೀಝ್, ಮಾಜಿ ಕಾರ್ಪೋರೇಟರ್ ಎನ್.ಕೆ.ಅಬೂಬಕರ್, ಸಂಶುದ್ದೀನ್ ಎಚ್‍ಬಿಟಿ, ಮುಸ್ತಫಾ ಕೆಎಂಆರ್, ಝಾಹಿದ್ ರೋಯಲ್, ಇಖ್ವಾನ್, ಅಝೀಝ್ ಎಎಟಿ, ಶಮಾ ಗೋಲ್ಡ್‍ನ ಇಕ್ಬಾಲ್, ಮುನೀರ್, ಚಾಬಸ್ ಗಾರ್ಡನ್‍ನ ಶೌಕತ್ ಮೊದಲಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಈ ಬಾರಿ ಸಂಸ್ಥೆಯ ವತಿಯಿಂದ ಎರಡು ಜೋಡಿಗಳಿಗೆ ವಿವಾಹ ನೆರವೇರಿಸಿಕೊಡಲಾಯಿತು.

ರಮೀಝ್ ಕೆ.ಎಂ.ಆರ್. ಸ್ವಾಗತಿಸಿದರು. ಮನ್ಸೂರ್ ಕಾರ್ಯಕ್ರಮ ನಿರೂಪಿಸಿದರು. ಆರಿಫ್ ಕುದ್ರೋಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News