ಮಾರ್ಚ್ 8ರಿಂದ ಎರ್ಮಾಳು ಉರೂಸ್
ಪಡುಬಿದ್ರಿ: ಜಾಮಿಯಾ ಮಸೀದಿ ಎರ್ಮಾಳುವಿನ ಹಝ್ರತ್ ಫೀರ್ ಯೂಸುಫ್ ಖಾನ್ ಶಾಹ್ ವಲಿಯುಲ್ಲಾಹಿ (ಖ.ಸಿ.ಅ) ದರ್ಗಾ ಶರೀಫ್ ಇದರ ಎರಡು ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಸಮಾರಂಭವು ಮಾರ್ಚ್ 8 ರಿಂದ 10ರವಚರೆಗೆ ನಡೆಯಲಿದೆ.
ಸೋಮವಾರ ಕಾಪು ಪ್ರಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ದರ್ಗಾ ಸಮಿತಿ ಹಾಗೂ ಉರೂಸ್ ಸಮಿತಿಯ ಅಧ್ಯಕ್ಷರಾದ ಆಸೀಫ್ ಹನ್ನಾನ್ ಮಾಹಿತಿ ನೀಡಿದರು.
8ರಂದು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್‍ಹಾಜ್ ಮುಹಮ್ಮದ್ ಅಝ್‍ಹರ್ ಫೈಝಿ ದುವಾ ನೆರವೇರಿಸಲಿದ್ದಾರೆ. ಎರ್ಮಾಳು ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಶಬ್ಬೀರ್ ಫೈಝಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಎಸ್‍ಕೆಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷರಾದ ಪ್ರೊ. ಅನೀಸ್ ಕೌಸರಿ ಮತಪ್ರವಚನ ನೀಡಲಿದ್ದಾರೆ.
9ರಂದು ಸಂಜೆ 4ಗಂಟೆಗೆ ಸಯ್ಯದ್ ಅರಬಿ ಜುಮ್ಮಾ ಮಸೀದಿ ಭಾಸ್ಕರ್ ನಗರ ಉಚ್ಚಿಲದಿಂದ ಎರ್ಮಾಳು ಜಾಮಿಯಾ ಮಸೀದಿಯ ತನಕ ಸಂದಲ್ ಮೆರವಣಿಗೆ ನಡೆಯಲಿದೆ.
ಸೌಹಾರ್ದ ಸಮ್ಮೇಳನ: ಸಂಜೆ 6.30ಕ್ಕೆ ಸೌಹಾರ್ದ ಸಮ್ಮೇಳನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಘಾಟನೆ ಹಾಗೂ ದುವಾ ದಕ ಜಿಲ್ಲಾ ಖಾಝಿ ಅಲ್‍ಹಾಜ್ ತ್ವಾಖಾ ಅಹಮದ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ. ಸೌಹಾರ್ದ ಸಂದೇಶ ಭಾಷಣವನ್ನು ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯ ಧರ್ಮಗುರು ರೆ.ಫಾ. ಅಶ್ವಿನ್ ಅರನ್ನಾ, ಮೂಲ್ಕಿಯ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಮಾಡಲಿದ್ದಾರೆ. ಅಲ್‍ಹಾಜ್ ಮುಹಮ್ಮದ್ ಬಾಖವಿ ಪೂಂಜಾಲಕಟ್ಟೆ ಉಸ್ತಾದ್, ಸಯ್ಯದ್ ಅರಬಿ ಜುಮ್ಮಾ ಮಸೀದಿಯ ಖತೀಬ್ ಇಸ್ಹಾಕ್ ಫೈಝಿ ಭಾಗವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಅಶೋಕ್ ರಾಜ್ ಬೀಡು ಎರ್ಮಾಳು ಇವರನ್ನು ಸನ್ಮಾನಿಸಲಾಗುವುದು. ಮುಖ್ಯಅತಿಥಿಗಳಾಗಿ ಧಾರ್ಮಿಕ, ಸಾಮಾಜಿಕ, ರಾಜಕೀಯ, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
10ರಂದು ಬೆಳಗ್ಗೆ 9ಗಂಟೆಗೆ ದ್ಸಿಕ್ರ್ ಮಜ್ಲಿಸ್ ಹಾಗೂ ಸಾಮೂಹಿಕ ಝಿಯಾರತ್ ನಡೆಯಲಿದ್ದು, ಆತ್ರಾಡಿ ಖಾಝಿ ಅಲ್‍ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ. ಮಧ್ಯಾಹ್ನ 12.30ರಿಂದ ಸರ್ವಧರ್ಮೀಯರಿಗೆ ಅನ್ನದಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಇಸ್ಮಾಯಿಲ್, ಮೊಹಿನುದ್ದೀನ್, ಇಬ್ರಾಹಿಂ ಉಪಸ್ಥಿತರಿದ್ದರು.