ದೊಡ್ಡಣಗುಡ್ಡೆ ಉರೂಸ್: ಪಾನಕ ವಿತರಿಸಿ ಸೌಹಾರ್ದ ಮೆರೆದ ಹಿಂದೂಗಳು
Update: 2019-03-04 20:52 IST
ಉಡುಪಿ, ಮಾ.4: ದೊಡ್ಡಣಗುಡ್ಡೆ ಉರೂಸ್ ಪ್ರಯುಕ್ತ ರವಿವಾರ ನಡೆದ ಸಂದಲ್ ಮೆರವಣಿಗೆಯಲ್ಲಿ ಸಾಗಿಬಂದ ಮುಸ್ಲಿಮರಿಗೆ ನಮೋ ಫ್ರೆಂಡ್ಸ್ ದೊಡ್ಡಣಗುಡ್ಡೆ ಮತ್ತು ಸ್ಥಳೀಯ ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ ನೇತೃತ್ವದಲ್ಲಿ ಪಾನೀಯ ವಿತರಣೆ ಮಾಡಿ ಸೌಹಾರ್ದ ಮೆರೆಯಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ದಾವೂದ್ ಅಬೂಬಕರ್, ಉಮೇಶ್ ಪೂಜಾರಿ, ವಿನಯ ಪೂಜಾರಿ, ಜುನೈದ್, ಯೋಗೀಶ್ ಆಚಾರ್ಯ, ರಾಜೇಶ್ ಕುಮಾರ್, ವಿಜಯ ಭಟ್, ಕಿಶೋರ್ ಕುಮಾರ್, ಜಯರಾಜ್ ಶೆಟ್ಟಿ, ಮನ್ಸೂರ್ ಮೊದಲಾದವರು ಉಪಸ್ಥಿತರಿದ್ದರು.