ರಾಮ್‌ದೇವ್‌ಗೆ ಅವಮಾನ: ವಿಡಿಯೊ ತೆಗೆದು ಹಾಕುವಂತೆ ಫೇಸ್‌ಬುಕ್‌ಗೆ ಕೋರ್ಟ್ ಸೂಚನೆ

Update: 2019-03-04 15:29 GMT

ಹೊಸದಿಲ್ಲಿ,ಮಾ.4: ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಅವಮಾನಿಸುವ ವಿಡಿಯೊಗಳನ್ನು ತೆಗೆದುಹಾಕುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಫೇಸ್‌ಬುಕ್‌ಗೆ ಆದೇಶಿಸಿದೆ.

ಇಂಥ ವಿಡಿಯೊಗಳನ್ನು ಗೂಗಲ್ ಮತ್ತು ಯೂಟ್ಯೂಬ್ ಈಗಾಗಲೇ ತೆಗೆದುಹಾಕಿವೆ ಎಂದು ನ್ಯಾಯಾಲಯ ತಿಳಿಸಿದೆ. ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ವಿವಿಧ ವೇಷಗಳನ್ನು ಧರಿಸಿ ರಾಮ್‌ದೇವ್ ಮತ್ತು ಪತಂಜಲಿ ಬಗ್ಗೆ ಅವಮಾನಕರ ಮಾತುಗಳನ್ನಾಡುವುದನ್ನು ಮತ್ತು ಬೆದರಿಕೆಗಳನ್ನು ಹಾಕುವುದನ್ನು ತೋರಿಸಲಾಗಿದೆ.

ಈ ವಿಡಿಯೊ ಗೂಗಲ್ ಮತ್ತು ಯೂಟ್ಯೂಬ್ ತಮಗೇ ವಿಧಿಸಿರುವ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಈ ವಿಡಿಯೊ ದೂರುದಾರರ ವಿರುದ್ಧ ಕೇವಲ ಆರೋಪಗಳನ್ನು ಮಾತ್ರ ಮಾಡುತ್ತಿಲ್ಲ ಜೊತೆಗೆ ಬೆದರಿಕೆಗಳನ್ನೂ ಹಾಕುತ್ತಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧೀಶೆ ಪ್ರತಿಭಾ ಎಂ. ಸಿಂಗ್ ಅಭಿಪ್ರಾಯಿಸಿದ್ದಾರೆ. ಮೇಲೆ ತಿಳಿಸಲಾದ ವಿಡಿಯೊದ ಲಿಂಕ್ ಗಳು ಇನ್ನು ಮುಂದೆ ಯಾರಿಗೂ ಸಿಗದಂತೆ ನೋಡಿಕೊಳ್ಳುವಂತೆ ನ್ಯಾಯಾಲಯ ಫೇಸ್‌ ಬುಕ್‌ ಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News