ಮಣಿಪಾಲ: ವ್ಯಕ್ತಿ ಆತ್ಮಹತ್ಯೆ
Update: 2019-03-04 22:54 IST
ಮಣಿಪಾಲ, ಮಾ.4: ವೈಯಕ್ತಿಕ ಕಾರಣದಿಂದ ಮನನೊಂದ ಪರ್ಕಳ 80 ಬಡಗುಬೆಟ್ಟು ನಿವಾಸಿ ನಾರಾಯಣ ಪೂಜಾರಿ(67) ಎಂಬವರು ಮಾ.4 ರಂದು ಮಧ್ಯಾಹ್ನ ಮನೆಯ ಹಿಂಬದಿಯ ಸಿಮೆಂಟ್ ಶೀಟಿನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.