‘ಗುಣಮಟ್ಟದ ಜೀವನ’ ಕುರಿತು ಕಾರ್ಯಾಗಾರ
ಶಿರ್ವ, ಮಾ.4: ಬಂಟಕಲ್ಲಿನ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾ ಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ವಿಭಾಗ ಮತ್ತು ರೋಟರ್ಯಾಕ್ಟ್ ಘಟಕಗಳು ಹಾಗೂ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಉಡುಪಿ ಶಾಖೆಯ ಸಹಯೋಗದೊಂದಿಗೆ ಗುಣಮಟ್ಟದ ಜೀವನ ಎಂಬ ವಿಷಯದ ಕುರಿತ ಕಾರ್ಯಾಗಾರವನ್ನು ಇತ್ತೀಚೆಗೆ ಮಹಾ ವಿದ್ಯಾ ಲಯದ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾ ಲಯದ ತರಬೇತುದಾರರಾದ ಡಾ.ಇ.ವಿ.ಸ್ವಾಮಿನಾಥನ್ ಮಾತನಾಡಿ, ಭರವಸೆಯನ್ನು ಕಳೆದುಕೊಳ್ಳದೆ ಜೀವನದ ಕಷ್ಟ ಪರಿಸ್ಥಿತಿಯನ್ನು ಎದುರಿಸಬೇಕು. ಸಂತೋಷ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಕೆಲವು ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ವೃತ್ತಿ ಜೀವನವನ್ನು ಉತತಿಮಗೊಳಿಸಲು ಸಹಾಯಕವಾಗುತ್ತದೆ ಎಂದರು.
ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ.ಬಾಲಚಂದ್ರ ಆಚಾರ್, ಕಾಲೇಜಿನ ರೋಟರ್ಯಾಕ್ಟ್ ಘಟಕದ ಸಂಯೋಜಕ ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಲಾವಣ್ಯ ಅತಿಥಿಗಳನ್ನು ಪರಿ ಚಯಿಸಿದರು. ಚೈ್ರ ಪೈ ಕಾರ್ಯಕ್ರಮ ನಿರೂಪಿಸಿದರು.