ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದ ಶಿವರಾತ್ರಿ ಜಾತ್ರಾ ಮಹೋತ್ಸವ

Update: 2019-03-05 18:22 GMT

ಉಳ್ಳಾಲ,ಮಾ.5: ದೇಶದೆಲ್ಲೆಡೆ ಪ್ರತಿಯೊಂದು ಶಿವನ ದೇಗುಲಗಳಲ್ಲಿ ಶಿವರಾತ್ರಿಯಂದು ಜನರು ಶ್ರದ್ದಾ ಭಕ್ತಿಗಳಲ್ಲಿ ಪಾಲ್ಗೊಳ್ಳುತಿರುವುದರಿಂದ ಆದ್ಯಾತ್ಮದ ಜಾಗೃತಿಯಾದ ಹಾಗೆ, ಶಿವರಾತ್ರಿಗೆ ಜಾಗರಣೆ ಮಾಡುವುದರ ಜೊತೆಯಲ್ಲಿ ದೇಶದ ಕಂಠಕ ದೂರವಾಗಲು ಭಾರತೀಯರು ಜಾಗೃತವಾಗಿರಬೇಕು ಎಂದು ಬಿಜೆಪಿ ಮಂಗಳೂರು ಕ್ಷೇತ್ರಾದ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು. 

ಅವರು ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದ ಶಿವರಾತ್ರಿ ಜಾತ್ರಾ ಮಹೋತ್ಸವ, ಕುಂಪಲ ರಥೋತ್ಸವದ ಮೂರು ದಿನಗಳ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ವಹಿಸಿದ್ದರು. ವಿಶ್ವಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಯುವ ಮರಾಠ ದಕ್ಷಿಣ ವಲಯದ ಗೌರವಾಧ್ಯಕ್ಷ ವೆಂಕಟಗಿರೀಶ್, ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಟಾನದ ಅದ್ಯಕ್ಷ ರಾಕೇಶ್ ಬೈಪಾಸ್, ಹಿಂದೂ ಜಾಗರಣ ವೇದಿಕೆ ಪ್ರಖಂಡ ಸಂಚಾಲಕ ಜಯಪ್ರಕಾಶ್ ಕುಂಪಲ, ತೊಕ್ಕೊಟ್ಟು ಹಿಂದೂ ಯುವ ಸೇನಾ ಅದ್ಯಕ್ಷ ದೀಕ್ಷಿತ್ ಪೂಜಾರಿ, ಕುಂಪಲ ಆದಿಶಕ್ತಿ ಕ್ರಿಕೆಟರ್ಸ್‍ನ ಅಧ್ಯಕ್ಷ ಪ್ರಕಾಶ್ ಕುಂಪಲ, ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ ಮೋಹನ್ ಶೆಟ್ಟಿ ಕುಂಪಲ, ಮಹಿಳಾ ಸಮಿತಿಯ ಲೀಲಾ ಗಟ್ಟಿ, ಕ್ಷೇತ್ರದ ಅರ್ಚಕ ಭವಾನಿಶಂಕರ ಶಾಂತಿ, ಶಿಲ್ಪ ಕಲಾವಿದ ಗಂಗಾದರ ಎಸ್.ಪೂಜಾರಿ, ಭಾಸ್ಕರ ಪೂಜಾರಿ ಕುಜುಮಗದ್ದೆ ಉಪಸ್ಥಿತರಿದ್ದರು.
ಮೋಹನ್ ಶೆಟ್ಟಿ ಕುಂಪಲ ಸ್ವಾಗತಿಸಿ, ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು, ಗೋಪಾಕೃಷ್ಣ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News