×
Ad

ಪ್ರವಾಸೋದ್ಯಮ ಹೆಚ್ಚೆಚ್ಚು ಜನರನ್ನು ತಲುಪಲಿ: ಸಚಿವೆ ಜಯಮಾಲ

Update: 2019-03-06 21:06 IST

ಉಡುಪಿ, ಮಾ.6: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಇದು ಹೆಚ್ಚೆಚ್ಚು ಜನರನ್ನು ತಲುಪುವಂತಾಗಬೇಕು. ಅತೀ ಹೆಚ್ಚು ಪ್ರಚಾರ ಪಡೆದು ಪ್ರಪಂಚದ ಮೂಲೆ ಮೂಲೆಯಲ್ಲಿರುವ ಜನರನ್ನು ಸೆಳೆಯುವಂತಾಗಬೇಕು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದ್ದಾರೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಗಳ ಸಹಯೋಗದಲ್ಲಿ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬುಧವಾರ ಉಡುಪಿ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಛಾಯಾ ಚಿತ್ರವನ್ನೊಳಗೊಂಡ ಕಾಫಿ ಟೇಬಲ್ ಬುಕ್ ‘ಉಡುಪಿ- ಎ ಮಿಸ್ಟಿಕಲ್ ಕೊಲಾಜ್’ ಇದನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಗಳ ಸಹಯೋಗದಲ್ಲಿ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಾಂಗಣದಲ್ಲಿಬುವಾರ ಉಡುಪಿ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಛಾಯಾ ಚಿತ್ರವನ್ನೊಳಗೊಂಡ ಕಾಫಿ ಟೇಬಲ್ ಬುಕ್ ‘ಉಡುಪಿ- ಎ ಮಿಸ್ಟಿಕಲ್ ಕೊಲಾಜ್’ ಇದನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು. ಮುಂದಿನ ದಿನಗಳಲ್ಲಿ ಎಷ್ಟು ಹೆಚ್ಚು ಜನರನ್ನು ತಲುಪಲು ಯಶಸ್ವಿಯಾಗುತ್ತೇವೊ, ಅಷ್ಟು ವೇಗದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಸಾಧ್ಯವಾಗುತ್ತದೆ. ಪ್ರವಾಸಿಗರನ್ನು ಸೆಳೆಯಲು ಇಲ್ಲಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಪ್ರವಾಸಿ ತಾಣಗಳಾಗಿ ಮಾಡಿದಾಗ ಪ್ರಪಂಚವನ್ನು ನಮ್ಮತ್ತ ಸೆಳೆಯಲು ಸಾಧ್ಯವಾಗುತ್ತದೆ ಎಂದವರು ನುಡಿದರು.

ಉಡುಪಿ ಜಿಲ್ಲೆ ಪಾರಂಪರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ. ಜಿಲ್ಲೆಯ ಭವ್ಯವಾದ ಇತಿಹಾಸ ಹಾಗೂ ನಮ್ಮ ಪರಂಪರೆಗಳನ್ನು ಮರೆಯಲು ಸಾಧ್ಯವಿಲ್ಲ. ಇಲ್ಲಿರುವ ನದಿಗಳು, ಬಸದಿಗಳು, ಚರ್ಚುಗಳು, ಇತಿಹಾಸ ಪ್ರಸಿದ್ಧ ದೇವಸ್ಥಾನಗಳು ಸಾಕ್ಷಾತ್ ದೇವರೆ ನೆಲೆಸಿರುವ ಕೀರ್ತಿ ಪಡೆದಿರುವ ನಾಡು. ದೇಶ ವಿದೇಶದ ಪ್ರವಾಸಿಗರು ಜಿಲ್ಲೆಗೆ ಬರಬೇಕು. ಒಂದೊಂದು ಭಾಗವನ್ನು ಪ್ರತ್ಯೇಕವಾಗಿ ಸೆಳೆಯುವ ಕೆಲಸವಾಗಬೇಕು. ಕರಾವಳಿ ನೆನಪಿನಲ್ಲಿಡುವ ಹಾಗೂ ಯುವಕರಿಗೆ ಉದ್ಯೋಗ ನೀಡುವ ತಾಣವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ 2018-19ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ 12 ಮಂದಿ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಪ್ರವಾಸಿ ಟ್ಯಾಕ್ಸಿಗೆ ತಲಾ ಮೂರು ಲಕ್ಷ ರೂ. ಸಹಾಯಧನವನ್ನು ವಿತರಿಸಿದರು.
ಅಲ್ಲದೇ ಉಡುಪಿ ಜಿಲ್ಲೆಯಲ್ಲಿ 2015-20ರ ನೀತಿಯಂತೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡ 9 ಹೋಟೆಲ್ ಯೋಜನೆಗಳಿಗೆ ಬಿಡುಗಡೆಯಾದ ಒಟ್ಟು 4 ಕೋಟಿ 69 ಲಕ್ಷ ರೂ. ಸಹಾಯ ಧನವನ್ನು ಸಚಿವೆ ಡಾ.ಜಯಮಾಲ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಉಡುಪಿ ನಗರಸಭೆ ಪೌರಾಯುಕ್ತ ಆನಂದ ಬಿ ಕಲ್ಲೋಳಿಕರ್, ಕೋಸ್ಟಲ್ ಟೂರಿಸಂ ಅಸೋಸಿಯೇಶನ್ ಅಧ್ಯಕ್ಷ ಮನೋಹರ್ ಶೆಟ್ಟಿ, ಅಪ್ನಾ ಹಾಲೀಡೇಸ್‌ನ ನಾಗರಾಜ್ ಹೆಬ್ಬಾರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಾಸ್ಕರ್ ಉಪಸ್ಥಿತರಿದ್ದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಅತಿಥಿಗಳನ್ನು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News