×
Ad

​ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

Update: 2019-03-06 21:40 IST

ಮಣಿಪಾಲ, ಮಾ.6: ಮಣಿಪಾಲದ ಈಶ್ವರನಗರದ ಜನತಾ ಟವರ್ಸ್ ಕಟ್ಟಡದ ವಸತಿ ಗೃಹದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಮಾ.5ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಉಡುಪಿಯ ಸ್ವರ್ಣ ಆರ್ಕೆಡ್ ಫ್ಲಾಟ್ ನಿವಾಸಿ ಸಿದ್ದಾಂತ್ ಶೆಟ್ಟಿ(23) ಹಾಗೂ ಬೆಂಗಳೂರು ಬಿಸಿಸಿ ಲೇಔಟ್‌ನ ಅದ್ವೈತ್ ವಿ.(20) ಬಂಧಿತ ಆರೋಪಿಗಳು. ಇವರು ಮಾರಾಟಕ್ಕಾಗಿ ಅಕ್ರಮ ದಾಸ್ತಾನು ಇಟ್ಟಿದ್ದ 255 ಗ್ರಾಂ ಗಾಂಜಾ, ಎರಡು ಮೊಬೈಲ್, 5000ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಒಟ್ಟು 48,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News