ಗೋಳಿಯಂಗಡಿ: ಜ್ಯುವೆಲ್ಲರಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಸೊತ್ತು ಕಳವು
Update: 2019-03-06 21:41 IST
ಶಂಕರನಾರಾಯಣ, ಮಾ.6: ಬೆಳ್ವೆ ಗ್ರಾಮದ ಗೋಳಿಯಂಗಡಿ ಬಾಲಾಜಿ ಕಾಂಪ್ಲೆಕ್ಸ್‌ನಲ್ಲಿರುವ ಜ್ಯುವೆಲ್ಲರಿಗೆ ಮಾ.5ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮಾರುತಿ ಜುವೆಲ್ಲರ್ಸ್‌ನ ಬೀಗವನ್ನು ಗ್ಯಾಸ್ ಕಟ್ಟರ್‌ನಿಂದ ಮುರಿದು ಒಳನುಗ್ಗಿದ ಕಳ್ಳರು ಮೂರು ಲಕ್ಷ ರೂ. ಮೌಲ್ಯದ ಬೆಳ್ಳಿಯ ಕಾಲು ದೀಪ, ಬೆಳ್ಳಿಯ ಕಾಲು ಗೆಜ್ಜೆ, ಬೆಳ್ಳಿಯ ಪೂಜಾ ಸಾಮಾಗ್ರಿ ಹಾಗೂ 75,000/ರೂ. ಮೌಲ್ಯದ ಅಂಗಡಿಯ ಸಿಸಿ ಕ್ಯಾಮರಾ ಡಿವಿಆರ್, ಹಾರ್ಡ್‌ಡಿಸ್ಕ್, ಕಂಪ್ಯೂಟರ್, ತೂಕ ಮಾಡುವ ಯಂತ್ರಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಅಲ್ಲದೆ ಒಳಗಡೆಯ ಸೇಪ್ ಲಾಕರಿಗೆ ಗ್ಯಾಸ್ ಕಟ್ಟರ್‌ನಿಂದ ಹಾನಿ ಮಾಡಿರುವುದು ಕಂಡುಬಂದಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.