ಪಾಕಿಸ್ತಾನದಿಂದ ಮತ್ತೊಮ್ಮೆ ತಿಪ್ಪರಲಾಗ: ಜೈಶೆ ಮುಹಮ್ಮದ್ ಪಾಕಿಸ್ತಾನದಲ್ಲಿಲ್ಲ ಎಂದ ಸೇನಾಧಿಕಾರಿ

Update: 2019-03-06 16:46 GMT

ಇಸ್ಲಾಮಾಬಾದ್, ಮಾ. 6: ಪುಲ್ವಾಮ ಭಯೋತ್ಪಾದಕ ದಾಳಿಯ ಹೊಣೆ ಹೊತ್ತಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದಲ್ಲಿಲ್ಲ ಎಂದು ಆ ದೇಶದ ಸೇನೆಯ ವಕ್ತಾರ ಹಾಗೂ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್‌ನ ಮಹಾ ನಿರ್ದೇಶಕ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದಾರೆ.

ಇದರೊಂದಿಗೆ ಪಾಕಿಸ್ತಾನ ಇನ್ನೊಮ್ಮೆ ತಿಪ್ಪರಲಾಗ ಹಾಕಿದೆ.

ಇದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಕೆಲವು ದಿನಗಳ ಹಿಂದೆ ನೀಡಿರುವ ಹೇಳಿಕೆಗೆ ವಿರುದ್ಧವಾಗಿದೆ. ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಪಾಕಿಸ್ತಾನದಲ್ಲಿದ್ದಾನೆ ಎಂಬುದಾಗಿ ಅವರು ಅಮೆರಿಕದ ಸಿಎನ್‌ಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಜೈಶೆ ಮುಹಮ್ಮದ್ ಪಾಕಿಸ್ತಾನದ ಒಳಗಿನಿಂದ ಪುಲ್ವಾಮ ದಾಳಿಗೆ ಹೊಣೆ ಹೊರುವ ಹೇಳಿಕೆಯನ್ನು ನೀಡಿಲ್ಲ ಎಂದು ಸಿಎನ್‌ಎನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘‘ಜೈಶೆ ಮುಹಮ್ಮದ್ ಪಾಕಿಸ್ತಾನದಲ್ಲಿಲ್ಲ. ಅದನ್ನು ವಿಶ್ವಸಂಸ್ಥೆ ಮತ್ತು ಪಾಕಿಸ್ತಾನಗಳು ನಿಷೇಧಿಸಿವೆ. ಎರಡನೆಯದಾಗಿ, ನಾವು ಯಾರದೇ ಒತ್ತಡದಲ್ಲಿ ಏನನ್ನೂ ಮಾಡುವುದಿಲ್ಲ’’ ಎಂದು ಮೇಜರ್ ಜನರಲ್ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News