×
Ad

ಅಂಜುಮನ್ ವಿದ್ಯಾರ್ಥಿ ಅಸ್ಜದ್ ರುಕ್ನುದ್ದೀನ್ ಯುನಿವರ್ಸಿಟಿ ಬ್ಲೂ

Update: 2019-03-06 23:27 IST

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಮಹಾವಿದ್ಯಾಲಯ ಮತ್ತು ಸ್ನಾತಕ ಕೇಂದ್ರದ ಬಿ.ಕಾಂ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿ ಮುಹಮ್ಮದ್ ಅಸ್ಜದ್ ಬಿನ್ ಉಮರ್ ಫಾರುಖ್ ರುಕ್ನುದ್ದೀನ್ ಟೀಯ್ಕೊಂಡೋ (Taekwondo) ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.  

ಅಂಜುಮನ್ ಶಿಕ್ಷಣ ಸಂಸ್ಥೆಯಿಂದ ಈ ಕ್ರೀಡೆಯಲ್ಲಿ ವಿಶ್ವವಿದ್ಯಾಲಯದ ಪ್ರಥಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಈ ವಿದ್ಯಾರ್ಥಿ ಪಾತ್ರನಾಗಿದ್ದು ಮಾ.9ರಂದು ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ರೊಹ್ಟಕ್ ನಲ್ಲಿ ಜರಗಲಿರುವ ಅಂತರ್ ವಿಶ್ವವಿದ್ಯಾಲಯ ಟೀಯ್ಕೊಂಡೋ (Taekwondo)  ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯನವನ್ನು ಪ್ರತಿನಿಧಿಸಲಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ ಅಭನಂದಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News