×
Ad

ಅಪಘಾತಕ್ಕೀಡಾಗಿದ್ದ ನಿವೃತ್ತ ಪೋಸ್ಟ್ ಮಾಸ್ಟರ್ ನಿಧನ

Update: 2019-03-06 23:40 IST

ಮೂಡುಬಿದಿರೆ:ನವೆಂಬರ್ ನಲ್ಲಿ ಕಾರ್ಕಳ ಸಮೀಪದ ಮೂರೂರುನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ಪಡುಕೊಣಾಜೆ ಶಾಖಾ ಅಂಚೆಕಚೇರಿಯ ನಿವೃತ್ತ ಅಂಚೆ ಮಾಸ್ಟರ್, ಪಡುಕೊಣಾಜೆಯ `ಆಶ್ರಯ' ನಿವಾಸಿ ಅಜಿತ್ ಕುಮಾರ್ ಆಳ್ವ(59)ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ಕಾರ್ಯಕ್ರಮ ನಿಮಿತ್ತ ತೀರ್ಥಹಳ್ಳಿಗೆ ತೆರಳಿದ್ದ ಅಜಿತ್ ಅವರು ತನ್ನ ಸಂಬಂಧಿಕರ ಕಾರಿನಲ್ಲಿ ಊರಿಗೆ ವಾಪಾಸಾಗುತ್ತಿದ್ದಾಗ ಮೂರೂರು ಎಂಬಲ್ಲಿ ಕಾರು ಮರಕ್ಕೆ ಢಿಕ್ಕಿ ಹೊಡೆದು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಇವರಿಗೆ ಗಂಭೀರ ಏಟು ತಗಲಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ಸಮಯ ಚಿಕಿತ್ಸೆ ಪಡೆದು ನಂತರ ಮನೆಗೆ ಕರೆತರಲಾಗಿತ್ತು. 

ನಾಲ್ಕು ವರ್ಷಗಳ ಹಿಂದೆ ಅಂಚೆ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಬಳಿಕ ಅವರು ಮೂಡುಬಿದಿರೆ ಕೋರ್ಟ್ ಆವರಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು.  
ಅವರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News