×
Ad

ಮೀಡಿಯಾ ವಿವೇಕ್-2019: ಆಳ್ವಾಸ್ ತಂಡ ರನ್ನರ್ ಅಫ್

Update: 2019-03-06 23:41 IST

ಮೂಡುಬಿದಿರೆ: ಪುತ್ತೂರಿನ ವಿವೇಕಾನಂದ  ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ‘’ಮೀಡಿಯಾ ವಿವೇಕ್-2019’’ ರಾಜ್ಯ ಮಟ್ಟದ ಪ್ರತಿಭಾ ಶೋಧಕ  ಮಾಧ್ಯಮ ಹಬ್ಬವನ್ನು ಆಯೋಜಿಸಿತ್ತು. ಈ ಮಾಧ್ಯಮ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಆಳ್ವಾಸ್ ವಿದ್ಯಾರ್ಥಿಗಳು ಬಹುಮಾನವನ್ನು ಪಡೆದುಕೊಂಡರು.  ರೇಡಿಯೋ ಜಾಕಿ ಸ್ಪರ್ಧೆಯಲ್ಲಿ ದ್ವಿತೀಯ ಪತ್ರಿಕೋಧ್ಯಮದ ದಿಶಾ ಶೆಟ್ಟಿ ಪ್ರಥಮ, ಲೈವ್ ರಿಪೋರ್ಟಿಂಗ್‍ನಲ್ಲಿ ನಾಗರಾಜ್ ಹಾಗೂ ಸುಶಾಂತ್ ತಂಡ  ದ್ವಿತೀಯ, ಮ್ಯಾಡ್  ಆ್ಯಡ್‍ನಲ್ಲಿ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಸಮಗ್ರ ರನ್ನರ್ ಅಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಉಪನ್ಯಾಸಕಿ ಸ್ವಾತಿ ಶೆಟ್ಟಿ ಮಾರ್ಗದರ್ಶನ ನೀಡಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯಜೀವನ್ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News