×
Ad

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ: 15 ಹೆಕ್ಟೇರ್ ಹುಲ್ಲುಗಾವಲಿಗೆ ಹಾನಿ

Update: 2019-03-07 20:19 IST

ಉಡುಪಿ, ಮಾ.7: ಮಾ. 4ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗಂಗಾಮೂಲ ಗಸ್ತಿನ ಭಗವತಿಗುಡ್ಡ ವ್ಯಾಪ್ತಿಯಲ್ಲಿ ಸಂಜೆ 6:30 ರ ಸುಮಾರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದು, ಈ ಬೆಂಕಿಯನ್ನು ಕುದುರೆಮುಖ ವನ್ಯಜೀವಿ ವಲಯದ ಸಿಬ್ಬಂದಿಗಳನ್ನು ಬಳಸಿ ರಾತ್ರಿ 9:30ರ ಸುಮಾರಿಗೆ ಸಂಪೂರ್ಣವಾಗಿ ಆರಿಸಲಾಗಿದೆ.

ಇದರಿಂದ ಒಟ್ಟಾರೆಯಾಗಿ 15ಹೆಕ್ಟೇರ್ ಪ್ರದೇಶದ ಹುಲ್ಲುಗಾವಲು ಮಾತ್ರ ಸುಟ್ಟು ಹೋಗಿದ್ದು, ಯಾವುದೇ ಮರಗಳು ಸುಟ್ಟಿಲ್ಲ. ಹಾಗೂ ಯಾವುದೇ ವನ್ಯ ಪ್ರಾಣಿಗಳು ಸಹ ಸಾವನಪ್ಪಿಲ್ಲ. ಈ ಬಗ್ಗೆ ಅರಣ್ಯ ಅಪರಾಧವನ್ನು ದಾಖಲು ಮಾಡಿ, ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News