ಕ.ರಾ.ರ.ಸಾ. ನಿಗಮದಲ್ಲಿ ಶಿಶಿಕ್ಷು ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
Update: 2019-03-07 20:31 IST
ಉಡುಪಿ, ಮಾ.7: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಚಿಸುವ ಎಸೆಸೆಲ್ಸಿ ಅಥವಾ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಪಾಸಾ(ಪಿಎಎಸ್‌ಎಎ) ವೃತ್ತಿಗೆ ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್‌ನಲ್ಲಿ(ಸಿಓಪಿಎ) ಐಟಿಐ ತೇರ್ಗಡೆಯಾದ ಅ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಮಾ.15 ರೊಳಗೆ ವಿಭಾಗೀಯ ನಿಯಂತ್ರಣಾಧಿಕಾರಿ (ನೇಮಕ), ಕ.ರಾ.ರ.ಸಾ.ನಿಗಮ, ಮಂಗಳೂರು ವಿಭಾಗ, ವಿಭಾಗೀಯ ಕಛೇರಿ, ಬಿಜೈ, ಮಂಗಳೂರು ಇಲ್ಲಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ನಿಗಮದ ಸಮೀಪದ ಘಟಕಗಳನ್ನು ಸಂಪರ್ಕಿಸುವಂತೆ ಮಂಗಳೂರು ಕರಾರಸಾನಿ ವಿಬಾಗೀಯ ನಿಯಂತ್ರಣಾಧಿಾರಿಗಳು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.