ಅಪರಿಚಿತ ಮೃತ್ಯು: ವಾರಸುದಾರರಿಗೆ ಸೂಚನೆ
Update: 2019-03-07 20:34 IST
ಉಡುಪಿ, ಮಾ.7: ಬುಧವಾರ ರಾತ್ರಿ 7:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದ ಎದುರು ಟೆಂಪೊ ಒಂದು ಡಿಕ್ಕಿ ಹೊಡೆದು ರಸ್ತೆ ದಾಟಲು ಬದಿಯಲ್ಲಿ ನಿಂತಿದ್ದ ಸುಮಾರು 50 ರಿಂದ 60 ವರ್ಷದ, 5.2 ಅಡಿ ಎತ್ತರದ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿರುವ ಅಪರಿಚಿತ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ 9:30ಕ್ಕೆ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ಸಂಚಾರ ಠಾಣೆ ದೂರವಾಣಿ ಸಂಖ್ಯೆ: 0820-2521332, ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ದೂರವಾಣಿ ಸಂಖ್ಯೆ:0820-2520329 ಅಥವಾಜಿಲ್ಲಾ ನಿಯಂತ್ರಣ ಕೊಠಡಿ ಉಡುಪಿ ದೂರವಾಣಿ ಸಂಖ್ಯೆ:0820-2526444ನ್ನು ಸಂಪರ್ಕಿ ಸುವಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.