ರಾಘವೇಂದ್ರ ಸಪ್ತಾಹ ಮಹೋತ್ಸವ ಉದ್ಘಾಟನೆ
ಉಡುಪಿ, ಮಾ.7: ಪರ್ಯಾಯ ಪಲಿಮಾರು ಮಠವು, ಮಂತ್ರಾಲಯ ರಾಘವೇಂದ್ರ ಸಪ್ತಾಹ ಕಾರ್ಯಾಚರಣಾ ಸಮಿತಿ ಸಹಯೋಗದೊಂದಿಗೆ ಕೃಷ್ಣಮಠದ ರಾಜಾಂಗಣದಲ್ಲಿ ಇಂದಿನಿಂದ ಮಾ.13ರವರೆಗೆ ರಾಘವೇಂದ್ರ ಸ್ವಾಮೀಜಿ ಪಟ್ಟಾಭಿಷೇಕ ಮತ್ತು ಜನ್ಮದಿನಗಳ ಸಂಸ್ಮರಣೆ ಪ್ರಯುಕ್ತ ಹಮ್ಮಿ ಕೊಂಡಿರುವ 26ನೇ ರಾಘವೇಂದ್ರ ಸಪ್ತಾಹಹ ಮಹೋತ್ಸವವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಬದುಕಿನಲ್ಲಿ ಕರ್ಮ ಅನಿವಾರ್ಯ. ಕರ್ಮಬಂಧ ತ್ಯಜಿಸಲು ಸಾಧ್ಯವಿಲ್ಲ. ಆದರೆ ನಿರಂತರ ಕೃಷ್ಣನ ಚಿಂತನೆಯಿಂದ ಕರ್ಮಲೋಪ ದೋಷದಿಂದ ಪಾರಾಗಬಹುದು. ಯೋಗಿಗಳಿೆ ಇದು ಸಾಧ್ಯವಾಗುತ್ತದೆ ಎಂದರು.
ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ವಿರಾಟ ಪರ್ವ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವಿಶೇಷಾಧಿಕಾರಿ ಕೆ.ಅಪ್ಪಣ್ಣಾಚಾರ್ಯ, ಅರ್ಚಕ ಪರಿಮಳಾಚಾರ್ಯ ಉಪಸ್ಥಿತರಿದ್ದರು. ಪ್ರಹ್ಲಾದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.