ನೇಣು ಬಿಗಿದು ಆತ್ಮಹತ್ಯೆ

Update: 2019-03-07 16:21 GMT

ಕೋಟ, ಮಾ.7: ಕೌಟುಂಬಿಕ ಕಾರಣಗಳಿಂದ ನೊಂದ ಮಹಿಳೆಯೊಬ್ಬರು ಕಳೆದ ರಾತ್ರಿ ಮನೆಯ ಕೋಣೆಯೊಂದರಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಕ್ಕಟ್ಟೆ ಗ್ರಾಮದ ಕಂಚುಗಾರ್ ಬೆಟ್ಟಿನಿಂದ ವರದಿಯಾಗಿದೆ.

ಇಲ್ಲಿನ ಲಕ್ಷ್ಮೀನಿವಾಸದ ಅಮರಾವತಿ ಶೆಟ್ಟಿ (38) ಎಂಬವರು ಬುಧವಾರರ ರಾತ್ರಿ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಮುಂದಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅವರಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಈ ಬಗ್ಗೆ ಕೆಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News