ಪಣಂಬೂರು: ನೀರು ಪಾಲಾಗುತ್ತಿದ್ದ ಇಬ್ಬರ ರಕ್ಷಣೆ
Update: 2019-03-07 22:19 IST
ಮಂಗಳೂರು, ಮಾ.7: ನಗರದ ಪಣಂಬೂರು ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಲೈಫ್‌ಗಾರ್ಡ್ ಸಿಬ್ಬಂದಿ ಗುರುವಾರ ಸಂಜೆ ರಕ್ಷಿಸಿದ್ದಾರೆ.
ಉತ್ತರಭಾರತ ಮೂಲದ ರವಿ (21), ರಾಜು (20) ಮಂಗಳೂರಿನಲ್ಲಿ ಬಾರ್‌ವೊಂದರಲ್ಲಿ ಫಾಸ್ಟ್ ಪುಡ್ ಕೆಲಸ ಮಾಡುತ್ತಿದ್ದು, ಸಂಜೆ ವೇಳೆ ಪಣಂಬೂರು ಬೀಚಿನಲ್ಲಿ ಮೋಜು ಮಾಡಲು ಬಂದಿದ್ದರು. ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರೂ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ವೇಳೆ ಪಣಂಬೂರು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.