ಬೆಳಕು, ಬುಲ್ ಟ್ರಾಲ್ ಮೀನುಗಾರಿಕೆಗೆ ನಿಷೇಧ
Update: 2019-03-07 22:31 IST
ಮಂಗಳೂರು, ಮಾ.7: ರಾಜ್ಯ ಹೈಕೋರ್ಟ್‌ನ ಆದೇಶ ಮತ್ತು ಕೇಂದ್ರ-ರಾಜ್ಯ ಸರಕಾರದ ಸೂಚನೆಯಂತೆ ಕರಾವಳಿಯಲ್ಲಿ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆದ್ದರಿಂದ ಮೀನುಗಾರಿಕೆ ಬೋಟುಗಳಲ್ಲಿರುವ 5 ಕೆ.ವಿ.ಗಿಂತ ಹೆಚ್ಚಿನ ಸಾಮರ್ಥ್ಯದ ಜನರೇಟರ್ ಗಳನ್ನು ತಕ್ಷಣ ಕಡ್ಡಾಯವಾಗಿ ತೆರವು ಮಾಡುವಂತೆ ಆದೇಶಿಸಿದೆ.
ಈ ಆದೇಶವನ್ನು ಮೀರಿ ಬೆಳಕು ಮೀನುಗಾರಿಕೆ ಮಾಡುವ ದೋಣಿಗಳಲ್ಲಿರುವ ಬೆಳಕು ಮೀನುಗಾರಿಕೆಗೆ ಉಪಯೋಗಿಸುವ ವಿದ್ಯುತ್ ದೀಪಗಳು ಮತ್ತು ಜನರೇಟರ್ ಹಾಗೂ ಬುಲ್ ಟ್ರಾಲಿಂಗ್ ಮಾಡುವ ದೋಣಿಗಳಲ್ಲಿರುವ ಬುಲ್‌ಟ್ರಾಲ್ ಬಲೆಗಳನ್ನು ಜಫ್ತಿ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.