ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಮೈಂಡ್ ಮ್ಯಾಪಿಂಗ್ ಸಂವಾದ ಕಾರ್ಯಗಾರ
ಮೂಡುಬಿದಿರೆ, ಮಾ. 7: ಮನುಷ್ಯನ ಮನಸ್ಸು ಅತ್ಯಂತ ಸೂಕ್ಷ್ಮವಾದುದು. ಇದು ಈತನ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ ವಾದಂತದ್ದು. ಮೆದುಳಿನ ಒಂದು ಭಾಗವಾದಂತಹ ಸುಪ್ತವಲಯವು ಮನುಷ್ಯನ ನಿತ್ಯ ಜೀವನದ ಶೇಕಡ 90ರಷ್ಟು ಚಟುವಟಿಕೆಗಳಿಗೆ ಸಂಬಂಧಿಸಿದಾಗಿದ್ದು ಈ ಸುಪ್ತವಲಯದ ಕಾರ್ಯಚಟುವಟಿಕೆಗಳು ಸರಿಯಾಗಿ ಜರುಗಿದಾಗ ಮನಸ್ಸು ಸದಾ ಉಲ್ಲಾಸಿತವಾಗಿರುತ್ತದೆ. ಆದುದರಿಂದ ವಿದ್ಯಾರ್ಥಿಗಳು ಸುಪ್ತವಲಯವು ಹರಿತಗೊಳ್ಳುವಂತಹ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಅವರು ಸದಾ ಕ್ರಿಯಾಶೀಲರಾಗಿರುತ್ತಾರೆಂದು ‘ಸಾಧನಾ ಅಕಾಡಮಿ’ಯ ಡಾ. ಸರ್ಫ್ರಾಝ್ ಜೆ ಹಾಶಿಮ್ ತಿಳಿಸಿದರು.
ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ ‘ಮೈಂಡ್ ಮ್ಯಾಪಿಂಗ್- ಮನಸ್ಸೊಂದು ಅದ್ಭುತ ಶಕ್ತಿ’ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಹಾಗೂ ಹೆತ್ತವರನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ. ಸರ್ಫ್ರಾಝ್ ಅವರನ್ನು ಸನ್ಮಾನಿಸಲಾಯಿತು. ಮೂಡಬಿದಿರೆ ವಲಯ ಸೇರಿದಂತೆ ಸುತ್ತಲಿನ 300 ಕ್ಕೂ ಅಧಿಕ ವಿದ್ಯಾರ್ಥಿ ಹೆತ್ತವರು ಪಾಲ್ಗೊಂಡಿದ್ದರು.
ಈ ಸಂವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ಇವರು ಉಪಸ್ಥಿತರಿದ್ದರು.