ಅಟಲ್ ಆವಿಷ್ಕಾರ ಯೋಜನೆಗೆ 1,000 ಕೋಟಿ ರೂ.

Update: 2019-03-07 17:49 GMT

ಹೊಸದಿಲ್ಲಿ,ಮಾ.7: ಅಟಲ್ ಆವಿಷ್ಕಾರ ಯೋಜನೆಯನ್ನು 2019-20ರವರೆಗೆ ಮುಂದುವರಿಸಲು ಮತ್ತು ವಿದ್ಯಾರ್ಥಿಗಳಲ್ಲಿ ವಿನೂತನ ಯೋಚನೆಗಳನ್ನು ಪ್ರಚೋದಿಸುವ ಅಟಲ್ ಕಲ್ಪನಾ ಪ್ರಯೋಗಾಲಯಗಳನ್ನು 10,000 ಶಾಲೆಗಳಿಗೆ ವಿಸ್ತರಿಸಲು 1,000 ಕೋಟಿ ರೂ. ನಿಗದಿಪಡಿಸಲು ಗುರುವಾರ ಸಂಪುಟ ಅನುಮೋದನೆ ನೀಡಿದೆ.

ಪ್ರತಿ ಅಟಲ್ ಕಲ್ಪನಾ ಪ್ರಯೋಗಾಲಯಕ್ಕೆ ಸಾಧನಗಳ ನಿರ್ವಹಣೆ ಮತ್ತು ಕಾರ್ಯಾಚರಣಾ ವೆಚ್ಚಕ್ಕಾಗಿ ಮೊದಲ ವರ್ಷ ತಲಾ 12 ಲಕ್ಷ ರೂ. ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ಪ್ರತಿ ವರ್ಷ 2 ಲಕ್ಷ ರೂ.ವರೆಗೆ ನೀಡಲಾಗುವುದು.

ಸರಕಾರಿ ಹೇಳಿಕೆಯ ಪ್ರಕಾರ, ಈವರೆಗೆ ದೇಶಾದ್ಯಂತ 5,441 ಅಟಲ್ ಕಲ್ಪನಾ ಪ್ರಯೋಗಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 623 ಜಿಲ್ಲೆಗಳ 2,171 ಪ್ರಯೋಗಾಲಯಗಳು ಈಗಾಗಲೇ ಮೊದಲ ಕಂತಿನ ಸಹಾಯಧನವನ್ನು ಪಡೆದುಕೊಂಡಿವೆ. ದೇಶದಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಟಲ್ ಆವಿಷ್ಕಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನೊಂದೆಡೆ ಅಟಲ್ ಪ್ರಯೋಗಾಲಯಗಳು, ವಿದ್ಯಾರ್ಥಿಗಳು ಖುದ್ದಾಗಿ ಪ್ರಯೋಗಗಳಲ್ಲಿ ಮತ್ತು ಸಂಶೋಧನೆಯಲ್ಲಿ ಭಾಗಿಯಾಗುವ ಮೂಲಕ ವಿನೂತನ ಯೋಚನೆಗೆ ಹಚ್ಚುವಂತೆ ಮಾಡಲು ನೆರವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News