ಬ್ರಾಯನ್ ಜೀವನ್ ಫರ್ನಾಂಡಿಸ್‍ಗೆ ಡಾಕ್ಟರೇಟ್
Update: 2019-03-07 23:48 IST
ಮಂಗಳೂರು: ಬ್ರಾಯನ್ ಜೀವನ್ ಫರ್ನಾಂಡಿಸ್ ಅವರ ಎಲೆಕ್ಟ್ರಿಕಲ್ ಸ್ವಿಚ್ಚಿಂಗ್ ಕ್ಯಾರೆಕ್ಟರಿಸ್ಟಿಕ್ಸ್ ಆ್ಯಂಡ್ ಥರ್ಮಲ್ ಪ್ರಾಪರ್ಟಿಸ್ ಆಫ್ ಟೆಲುರಿಯಂ ಬೇಸ್ಡ್ ಚಾಲ್ಕೋಜಿನೈಡ್ ಗ್ಲಾಸ್ಸಿ ಅಲೋಯ್ಸ್ ಎಂಬ ಮಹಾ ಪ್ರಬಂಧಕ್ಕೆ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (ಎನ್‍ಐಟಿಕೆ) ಸುರತ್ಕಲ್ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಅವರು ಭೌತ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಎನ್. ಕೆ. ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿರುತ್ತಾರೆ.
ಬ್ರಾಯನ್ ಜೀವನ್ ಫರ್ನಾಂಡಿಸ್ ಬಂಟ್ವಾಳ ತಾಲೂಕಿನ ಸೋರ್ನಾಡು ಶಾಲೆಯ ಮುಖ್ಯೋಪಾಧ್ಯಾಯರಾದ ಬೆನೆಡಿಕ್ಟ್ ಫರ್ನಾಂಡಿಸ್ ಮತ್ತು ನಿವೃತ್ತ ಶಿಕ್ಷಕಿ ಜೋಸ್ಟಿನ್ ರೊಡ್ರಿಗಸ್ ಪುತ್ರ ಹಾಗೂ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ಬೆಂಗಳೂರಿನ ಹಿರಿಯ ಸಹಸಂಶೋಧಕಿ ನೊಲಿಟ ಸಲ್ದಾನ್ಹಾ ರವರ ಪತಿ.